ಮುಂಬೈನಲ್ಲಿ ಬೈಕ್ ಮೇಲೆ ಬಲವಂತವಾಗಿ ‘ಐ ಲವ್ ಮುಹಮ್ಮದ್’ ಸ್ಟಿಕ್ಕರ್‌ ಅಂಟಿಸಿದ ವಿಡಿಯೋ ವೈರಲ್

Updated on: Oct 03, 2025 | 8:05 PM

'ಐ ಲವ್ ಮುಹಮ್ಮದ್' ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬೈನ ಕುರ್ಲಾದ ಎಲ್‌ಬಿಎಸ್ ರಸ್ತೆಯಲ್ಲಿ ಸೆಪ್ಟೆಂಬರ್ 30ರಂದು ನಡೆದ ಘಟನೆಯ ವಿಡಿಯೋವನ್ನು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಹಂಚಿಕೊಂಡಿದ್ದಾರೆ. ಈ ವಿಡಿಯೋ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಂಬೈ ಪೊಲೀಸರು ಈ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಮುಂಬೈ, ಅಕ್ಟೋಬರ್ 3: ಮುಂಬೈನಲ್ಲಿ ಐ ಲವ್ ಮುಹಮ್ಮದ್ (I love Muhammad) ವಿವಾದ ಭುಗಿಲೆದ್ದಿದ್ದು, ಕೆಲವು ಅಪರಿಚಿತ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳ ಮುಂದೆಯೇ ವಾಹನಗಳ ಮೇಲೆ ಬಲವಂತವಾಗಿ ‘ಐ ಲವ್ ಮುಹಮ್ಮದ್’ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿರುವುದನ್ನು ಕಾಣಬಹುದು. ಮುಂಬೈನ ಕುರ್ಲಾದ ಎಲ್‌ಬಿಎಸ್ ರಸ್ತೆಯಲ್ಲಿ ನಡೆದಿರುವ ಘಟನೆಯ ವೀಡಿಯೊವನ್ನು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಹಂಚಿಕೊಂಡಿದ್ದಾರೆ. ಅವರು ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಮುಂಬೈ ಪೊಲೀಸರು ಈ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 03, 2025 08:02 PM