ಜಾತಿಗಣತಿ ಮೂಲಕ ಆರ್ಎಸ್ಎಸ್ ಸದಸ್ಯರ ಟಾರ್ಗೆಟ್: ಸಚಿವ ಪ್ರಲ್ಹಾದ್ ಜೋಶಿ ಬಾಂಬ್
ಹುಬ್ಬಳ್ಳಿಯಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ‘ಜಾತಿಗಣತಿ ಮೂಲಕ ಆರ್ಎಸ್ಎಸ್ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಜಾತಿಗಣತಿ ಸರ್ವೆ ಕಾರ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಅಕ್ಟೋಬರ್ 7ಕ್ಕೆ ಸಮೀಕ್ಷೆ ಮುಕ್ತಾಯಗೊಳ್ಳಲಿದೆ. ಈವರೆಗೆ ರಾಜ್ಯದಲ್ಲಿ 90 ಲಕ್ಷ ಮನೆಗಳು ಸರ್ವೆ ಮುಕ್ತಾಯವಾಗಿದೆ.
ಹುಬ್ಬಳ್ಳಿ, ಅಕ್ಟೋಬರ್ 03: ರಾಜ್ಯದಲ್ಲಿ 90 ಲಕ್ಷ ಮನೆಗಳು ಸರ್ವೆ ಮುಕ್ತಾಯವಾಗಿದೆ. ಹೀಗಿರುವಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೊಸ ಬಾಂಬ್ ಸಿಡಿಸಿದ್ದಾರೆ. ಜಾತಿಗಣತಿ ಸರ್ವೆಯಲ್ಲಿರುವ ಅಂಶಗಳ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ನೀವು ಯಾವುದಾದರೂ ಸಂಘಟನೆಯ ಸದಸ್ಯರಾಗಿದ್ದೀರಾ ಅಂತಾ ಕೇಳುತ್ತಾರೆ. ಆರ್ಎಸ್ಎಸ್ ಅಂದ್ರೆ ಹಿಡಿದುಕೊಂಡು ಹೋಗೋದು. ವಿಶ್ವಹಿಂದೂಪರಿಷತ್ ಅಂದರೆ ಕಣ್ಣಿಡುತ್ತಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
