Karnataka Assembly Polls; ಸ್ಟಾರ್ ಪ್ರಚಾಕರು ಬೇಕಿಲ್ಲ, ಸುಧಾಕರ್​ರನ್ನು ಸೋಲಿಸಲು ನಾನೊಬ್ಬನೇ ಸಾಕು: ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ

|

Updated on: May 08, 2023 | 6:08 PM

ಪ್ರದೀಪ್ ತಲೆಯಲ್ಲಿ ಹತ್ತು ಹಲವು ಯೋಜೆನಗಳಿವೆ. ಜನರನ್ನು ರಂಜಿಸುವ, ಅಮಿಶಕ್ಕೊಳಪಡಿಸುವ ಆಶ್ವಾಸನೆಗಳನ್ನು ಅವರು ನೀಡುತ್ತಿಲ್ಲ.

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರದೀಪ್ ಈಶ್ವರ್ (Pradeep Eshwar) 2023ರ ವಿಧಾನಸಭಾ ಚುನಾವಣೆಯಲ್ಲಿ (assembly polls) ಒಂದು ಎನಿಗ್ಮಾ ಆಗಿ ಉದ್ಭವಿಸಿದ್ದಾರೆ ಎಂದರೆ ಅತಿಶಯೋಕ್ತಿ ಅನಿಸದು. ಅವರು ಸೆಣಸುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಹೆವಿವೇಟ್ ಎಂದು ಕರೆಯಬಹುದಾದ ಆರೋಗ್ಯ ಸಚಿವ K ಸುಧಾಕರ್ (Dr K Sudhakar) ಅವರ ವಿರುದ್ಧ. ಅವರ ತಲೆಯಲ್ಲಿ ಹತ್ತು ಹಲವು ಯೋಜೆನಗಳಿವೆ. ಜನರನ್ನು ರಂಜಿಸುವ, ಅಮಿಶಕ್ಕೊಳಪಡಿಸುವ ಆಶ್ವಾಸನೆಗಳನ್ನು ಅವರು ನೀಡುತ್ತಿಲ್ಲ. ಕ್ಷೇತ್ರದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ, ವಿದ್ಯಾವಂತ ನಿರುದ್ಯೋಗಿಗಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತೆ ಮಾಡುವ ಮತ್ತು ಪ್ರತಿವರ್ಷ ಕ್ಷೇತ್ರದಿಂದ ನೂರಾರು ಐಎಎಸ್, ವೈದ್ಯರು ಮತ್ತು ಇಂಜಿನೀಯರ್ಗಳನ್ನು ಸೃಷ್ಟಿಸುವ ಕನಸು ಅವರು ಇಟ್ಟುಕೊಂಡಿದ್ದಾರೆ. ಸ್ಟಾರ್ ಪ್ರಚಾರಕರ ಅವಶ್ಯಕತೆ ತನಗಿಲ್ಲ ಎನ್ನುವ ಈಶ್ವರ್ ಸುಧಾಕರ್ ರನ್ನು ಸೋಲಿಸಲು ತಾನೊಬ್ಬನೇ ಸಾಕು ಅನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 08, 2023 06:08 PM