ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಲು ಸುಮಾರು 300 ಲೋಕಸಭಾ ಸಂಸದರು ಬಯಸಿದ್ದರು, ಆದರೆ ಅವರಿಗೆ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷದ ಸಂಸದರು ಜಂತರ್ ಮಂತರ್‌ನತ್ತ ತೆರಳಲಿದ್ದಾರೆ ಎಂದು ತಿಳಿಸಿದರು ಮತ್ತು ಸಿಇಸಿ ವಿರುದ್ಧ ಪ್ರತಿಭಟನೆ ನಡೆಸಲು ನಿಗದಿತ ಪ್ರತಿಭಟನಾ ಸ್ಥಳವನ್ನು ತಲುಪಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು. ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗಬೇಕೆಂದು ತಾವು ಬಯಸುವುದಾಗಿ ತಿಳಿಸಿದ ರಾಹುಲ್ ಗಾಂಧಿ, ಪ್ರತಿಯೊಂದು ಎಫ್‌ಐಆರ್ ನನಗೆ ಸಿಗುವ "ಪದಕ" ಎಂದು ಬಣ್ಣಿಸಿದರು.
ನವದೆಹಲಿ, ಅಕ್ಟೋಬರ್ 7: ಚುನಾವಣಾ ಆಯೋಗದ ವಿರುದ್ಧ ಆಕಾಶವಾಣಿ ಭವನದ ಬಳಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಹಾಗೂ ಇತರ ಸಂಸದರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ಎಫ್‌ಐಆರ್‌ಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಈಗಾಗಲೇ ಸುಮಾರು 45 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ತಿಳಿಸಿದ ಅವರು, ತಮ್ಮ ವಿರುದ್ಧದ ಎಫ್ಐಆರ್ಗಳ ಸಂಖ್ಯೆ 100 ದಾಟಿದರೂ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿಯೊಂದು ಎಫ್‌ಐಆರ್ ಅನ್ನು ನನಗೆ ಸಿಗುವ ಗೌರವದ ಪದಕ ಎಂದು ಭಾವಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹರಿಹಾಯ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us