ರೆಡ್ಡಿಯ ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿದ್ದೇ ನಾನು, ಸಿದ್ದರಾಮಯ್ಯ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ: ಟಪ್ಪಾಲ್ ಗಣೇಶ್

Updated on: May 06, 2025 | 7:04 PM

ಜನಾರ್ಧನ ರೆಡ್ಡಿಯ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಸತ್ಯ ಶೋಧನಾ ವರದಿಯನ್ನು ಕೈಯಲ್ಲಿ ಹಿಡಿದು ಬೆಂಗಳೂರುನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೂ ರೆಡ್ಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ರೆಡ್ಡಿ ವಿರುದ್ಧ ಹೋರಾಡಿದ ತನಗೆ ಸಿದ್ದರಾಮಯ್ಯ ಭೇಟಿಗೆ ಒಂದು ಅಪಾಯಿಂಟ್ಮೆಂಟ್ ಕೂಡ ಸಿಗಲಿಲ್ಲ ಎಂದು ಟಪ್ಪಾಲ್ ಗಣೇಶ್ ಕೋಪಭರಿತ ವಿಷಾದದಿಂದ ಹೇಳಿದರು.

ಬಳ್ಳಾರಿ, ಮೇ 6 : ಟಪಾಲ್ ಗಣೇಶ್ (Tappal Ganesh) ಅವರನ್ನು ರಾಜ್ಯ ಮರೆತು ಹೋಗಿರಬಹುದು, ಅದರೆ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರಿಗೆ ಮೊದಲು ಮತ್ತು ಈಗ ಜೈಲು ಶಿಕ್ಷೆಯಾಗುವುದಕ್ಕೆ ಅವರೇ ಕಾರಣ. ಸಿಬಿಐ ಕೋರ್ಟ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧಾನ ರೆಡ್ಡಿ ದೋಷಿ ಎಂದು ಘೋಷಿಸಿ 7-ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಸಲಿಗೆ ರೆಡ್ಡಿಯವರ ಗಣಿಗಾರಿಕೆ ಧಂದೆಯನ್ನು ಬಂದ್ ಮಾಡಿಸಿದ್ದೇ ತಾನು ಎಂದು ಟಪಾಲ್ ಗಣೇಶ್ ಹೇಳುತ್ತಾರೆ. ನಮ್ಮ ಬಳ್ಳಾರಿ ವರದಿಗಾರನೊಂದಿಗೆ ಮಾತಾಡಿರುವ ಅವರು, 1956ರಿಂದ ತನ್ನ ತಾತ ಬಳ್ಳಾರಿ ಮತ್ತು ಸುತ್ತಮುತ್ತ ಜಾಗಗಳಲ್ಲಿ ಗಣಿಗಾರಿಕೆ ಮಾಡಿಕೊಂಡಿದ್ದರು, 4,000 ಎಕರೆ ಭೂಮಿಗೆ ಅವರು ಲೀಸ್ ಹೋಲ್ಟರ್ ಆಗಿದ್ದರು, ಗಣಿಗಾರಿಕೆಯನ್ನು ತಾವು ವಂಶಪಾರ್ಯಂಪರವಾಗಿ ಮಾಡಿಕೊಂಡು ಬಂದಿದ್ದೇವೆ, ಅದರೆ ಗಾಲಿ ಜನಾರ್ಧನ ರೆಡ್ಡಿ ಅಗಿನ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಜೊತೆಗೂಡಿ ನಮ್ಮ ಗಣಿಗಾರಿಕೆ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡರು ಎಂದು ಗಣೇಶ್ ಹೇಳುತ್ತಾರೆ.

ಇದನ್ನೂ ಓದಿ:  ಅಂಗಲಾಚಿದರೂ ಕೇಳದ ಕೋರ್ಟ್: ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್, ಶಾಸಕ ಸ್ಥಾನಕ್ಕೂ ಕುತ್ತು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us