ಯತ್ನಾಳ್ ಅವರಿಗಾಗಿ ಸಾಯಂಕಾಲದವರೆಗೆ ಕಾಯುತ್ತಿದ್ದೆ, ಅದರೆ ಅವರು ಬರಲಿಲ್ಲ: ಯುಟಿ ಖಾದರ್, ಸ್ಪೀಕರ್

ಅರುಣ್​ ಕುಮಾರ್​ ಬೆಳ್ಳಿ

Updated on: May 02, 2025 | 8:27 PM

ಸ್ಪೀಕರ್ ಯುಟಿ ಖಾದರ್ ಮತ್ತು ಶಿವಾನಂದ ಪಾಟೀಲ್ ನಡುವೆ ನಡೆದ ಚರ್ಚೆಯೇನು, ಸಭಾಧ್ಯಕ್ಷರು ರಾಜೀನಾಮೆ ಪತ್ರ ನೀಡಿದ ಶಾಸಕನಿಗೆ ಹೇಳಿದ್ದೇನು ಅಂತ ಪತ್ರಕರ್ತರೊಬ್ಬರು ಕೇಳಿದಾಗ, ಏನು ಹೇಳಬೇಕಾಗಿತ್ತೋ ಅದನ್ನು ಹೇಳಿಯಾಗಿದೆ, ಮಾತಾಡಿದ್ದನ್ನು ಬಹಿರಂಗವಾಗಿ ಹೇಳಲಾದೀತೆ ಎಂದು ಖಾದರ್ ಹೇಳಿದರು. ಪತ್ರಕರ್ತರು ಕೇಳಿದ ಬಹಳಷ್ಟು ಪ್ರಶ್ನೆಗಳಿಗೆ ಅವರು ಚುಟುಕಾಗಿ ಉತ್ತರಿಸಿದರು ಇಲ್ಲವೇ ಉತ್ತರಿಸದೆ ಬಿಟ್ಟರು.

ಬೆಂಗಳೂರು, ಮೇ 2: ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ರಾಜೀನಾಮೆ ಪತ್ರದೊಂದಿಗೆ ಬರುತ್ತಾರೆ ಅಂತ ಸಾಯಂಕಾಲದವರೆಗೆ ಕಾಯುತ್ತಿದ್ದೆ, ಅದರೆ ಅವರು ಬರಲಿಲ್ಲ ಎಂದು ಹೇಳಿದರು. ಶಿವಾನಂದ ಪಾಟೀಲ್ ಅವರಿಗೆ ಹೇಳಬೇಕಾಗಿದ್ದನ್ನು ಹೇಳಿದ್ದೇನೆ, ಸಂವಿಧಾನದ ನಿಯಮಗಳ ಪ್ರಕಾರ ಅವರು ರಾಜೀನಾಮೆ ಸ್ವೀಕರಿಸಲು ಬರಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರು. ಶಿವಾನಂದ ಪಾಟೀಲ್ ಹೀಗೆ ಇದ್ದಕ್ಕಿದ್ದಂತೆ ರಾಜೀನಾಮೆ ಸಲ್ಲಿಸಿದರೆ ಅವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಮತ್ತು ತಮ್ಮನ್ನು ಆರಿಸಿ ಕಳಿಸಿದ ಜನಕ್ಕೆ ಅನ್ಯಾಯ ಮಾಡಿದಂತಾಗಲ್ಲವೇ ಅಂತ ಕೇಳಿದ ಪ್ರಶ್ನೆಗೆ ಖಾದರ್, ಅದು ಶಾಸಕರು ಮತ್ತು ಕ್ಷೇತ್ರದ ಜನರ ನಡುವಿನ ವಿಚಾರ ಎಂದು ಹೇಳಿದರು.

ಇದನ್ನೂ ಓದಿ: Shivanand Patil Resign: ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ್ ರಾಜೀನಾಮೆ, ಯತ್ನಾಳ್ ಸವಾಲು ಸ್ವೀಕರಿಸಿದ ಸಚಿವ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.