ಪುನೀತ್ ರಾಜಕುಮಾರ್ಗೆ ‘ಕರ್ನಾಟಕ ರತ್ನ’ ನೀಡುತ್ತಿರುವುದು ಸ್ವಾಗತಾರ್ಹ, ಆದರೆ ಸರ್ಕಾರ ಹೇಳೋದು ಯಾಕೆ? ಸಿದ್ದರಾಮಯ್ಯ
ಆದರೆ ಸರ್ಕಾರ ಹಿಂದುಳಿದ ವರ್ಗಗಳಿಗೆ ಉಚಿತವಾಗಿ ರೂ. 354 ಕೋಟಿ ನೀಡುತ್ತಿರುವುದಾಗಿ ಸುಳ್ಳು ಹೇಳುವುದು ಯಾಕೆ? ಹಾಗೆ ಬಿಡುಗಡೆ ಮಾಡಿದ್ದರೆ ಆದೇಶದ ಪ್ರತಿ ತೋರಿಸಲಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದರು.
ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪುನೀತ್ ರಾಜಕುಮಾರ (Puneeth Rajkumar) ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುತ್ತಿರುವುದನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ವಾಗತಿಸಿದರು. ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು, ಡಾ ರಾಜಕುಮಾರ (Dr Rajkumar) ಅವರ ಮಗನಿಗೆ ಕರ್ನಾಟಕ ಗೌರವ ಸಲ್ಲಬೇಕಾದದ್ದೇ, ಆದರೆ ಸರ್ಕಾರ ಹಿಂದುಳಿದ ವರ್ಗಗಳಿಗೆ ಉಚಿತವಾಗಿ ರೂ. 354 ಕೋಟಿ ನೀಡುತ್ತಿರುವುದಾಗಿ ಸುಳ್ಳು ಹೇಳುವುದು ಯಾಕೆ? ಹಾಗೆ ಬಿಡುಗಡೆ ಮಾಡಿದ್ದರೆ ಆದೇಶದ ಪ್ರತಿ ತೋರಿಸಲಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದರು.