ಅರ್ಧ ಆಸ್ತಿಯನ್ನು ನನಗೆ ವೋಟು ನೀಡಿದ ಚಿಕ್ಕಪೇಟೆಯ ಜನಕ್ಕೆ ಹಂಚುತ್ತೇನೆ, ಮಗನಿಗೆ ಕೊಡಲ್ಲ: ಕೆಜಿಎಫ್ ಬಾಬು

Updated on: Jul 16, 2025 | 5:15 PM

ಕೆಜಿಎಫ್ ಬಾಬು ನೀಡಿದ ಚೆಕ್​ಗಳು ಬೌನ್ಸ್ ಎಂಬ ಆರೋಪವನ್ನು ಸಾರಾಸಗಟು ತಳ್ಳಿಹಾಕಿದ ಬಾಬು, ತಾನು ನೀಡಿರುವ ಚೆಕ್ ಬೌನ್ಸ್ ಆಗೋದು ಸಾಧ್ಯವೇ ಇಲ್ಲ, ಒಂದೇ ಒಂದು ಚೆಕ್ ಬೌನ್ಸ್ ಆಗಿರೋದನ್ನು ತೋರಿಸಿದರೆ, ಇಡೀ ಆಸ್ತಿಯನ್ನು ಬಿಟ್ಟುಕೊಟುತ್ತೇನೆ ಎಂದು ಹೇಳುತ್ತಾರೆ. 4-5 ಮನೆಗಳನ್ನು ಕಟ್ಟಿಕೊಡದ ಅರೋಪ ಮಾಡಿದರೆ ಅದನ್ನು ಅಂಗೀಕರಿಸುತ್ತೇನೆ ಎಂದು ಬಾಬು ಹೇಳಿದರು.

ಬೆಂಗಳೂರು, ಜುಲೈ 16: ಉದ್ಯಮಿ  ಕೆಜಿಎಫ್ ಬಾಬು ಮತ್ತು ಅವರ ಮಗ ಹಾಗೂ ಅವನ ಮಾವನ ಮನೆಯವರೊಂದಿಗೆ ನಡೆಯುತ್ತಿರುವ ಜಗಳ ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು ತನಗಿರುವ ಸುಮಾರು 4,000-5,000 ಕೋಟಿ ಆಸ್ತಿಯಲ್ಲಿ (property) ಅರ್ಧ ತನ್ನ ಹೆಂಡಿರು ಮಕ್ಕಳಿಗೆ ಮತ್ತು ಉಳಿದರ್ಧವನ್ನು ತಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವೋಟು ನೀಡಿದ ಚಿಕ್ಕಪೇಟೆಯ 22,000 ಜನಕ್ಕೆ ಹಂಚುತ್ತೇನೆಯೇ ಹೊರತು ತನ್ನ ಮಾವನೊಂದಿಗೆ ಸೇರಿ ತನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಮಗನಿಗೆ ಕೊಡೋದಿಲ್ಲ ಎಂದು ಹೇಳುತ್ತಾರೆ. ನಮ್ಮ ವರದಿಗಾರ ಯೋಚಿಸಿ ಮಾತಾಡಿ, ಟಿವಿ9 ಮುಂದೆ ನಿಂತು ಈ ಮಾತು ಹೇಳುತ್ತಿರುವಿರಿ ಅಂದಾಗ, ನಾನು ಸುಳ್ಳುಗಾರನಲ್ಲ, ಮೋಸಗಾರನಲ್ಲ, ನನ್ನ ಮಾತಿಗೆ ಬದ್ಧ, ಟಿವಿ9 ಸಮಕ್ಷಮದಲ್ಲಿ ವಿಲ್ ಕೂಡ ಮಾಡಿಸಲು ತಯಾರು ಎಂದು ಬಾಬು ಹೇಳುತ್ತಾರೆ.

ಇದನ್ನೂ ಓದಿ:  Karnataka Assembly Polls: ಇಬ್ಬರು ಹೆಂಡತಿಯರ ತಲೆಮೇಲೆ ಕೈಯಿಟ್ಟು ಚಿಕ್ಕಪೇಟೆ ಜನರಿಗೆ ಮೋಸ ಮಾಡಲ್ಲವೆಂದ ಕೆಜಿಎಫ್ ಬಾಬು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ