ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ

Updated on: Jul 09, 2025 | 11:17 AM

ತರುಣ್ ಸುಧೀರ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಏಳುಮಲೆ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಟೈಟಲ್ ಟೀಸರ್ ಲಾಂಚ್​ಗೆ ಶಿವಣ್ಣ ಆಗಮಿಸಿ ಶುಭ ಹಾರೈಸಿದರು. ಈ ವೇಳೆ ಅವರು ಒಂದು ವಿಚಾರವನ್ನು ರಿವೀಲ್ ಮಾಡಿದರು .

ತರುಣ್ ಸುಧೀರ್ ಅವರು ‘ಏಳುಮಲೆ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಣ ಈ ಇತ್ರಕ್ಕೆ ಹೀರೋ ಆದರೆ, ಪ್ರಿಯಾಂಕಾ ಆಚಾರ್ ನಾಯಕಿ. ಜಗಪತಿ ಬಾಬು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ಲಾಂಚ್​​ಗೆ ಶಿವಣ್ಣ ಆಗಮಿಸಿದ್ದರು. ಈ ವೇಳೆ ಅವರು ಹಳೆಯ ನೆನಪಿನ ಬುತ್ತಿ ತೆರೆದಿಟ್ಟರು. ‘ನನಗೆ ತರುಣ್ (Tharun Sudhir) ತಂದೆ ಸುಧೀರ್ ಮೊದಲಿನಿಂದಲೂ ಗೊತ್ತು. ನಾನು ಅವರ ಮನೆಯಲ್ಲಿ ಸಾಕಷ್ಟು ಬಾರಿ ಊಟ ಮಾಡಿದ್ದೇನೆ. ಕೋಳಿ ಸಾರು ತಿಂದಿದ್ದೇನೆ. ತರುಣ್ ಜೊತೆ ಜೊತೆ ಒಂದು ಸಿನಿಮಾ ಮಾಡಬೇಕು. ಮುಂದಿನ ದಿನಗಳಲ್ಲಿ ಮಾಡ್ತೀನಿ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.