ದರ್ಶನ್ ಬಗ್ಗೆ ಮಾತನಾಡಿದ ಹ್ಯಾಂಡ್ಸಮ್ ಹೀರೋ ಧ್ಯಾನ್

|

Updated on: Jul 16, 2024 | 8:28 AM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರು ಕಳೆದ ಒಂದು ತಿಂಗಳಿಂದ ಜೈಲಿನಲ್ಲೇ ಇದ್ದಾರೆ. ಅವರ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ ಬಗ್ಗೆ ಧ್ಯಾನ್ ಅವರು ಮಾತನಾಡಿದ್ದಾರೆ.

‘ಮೊನಾಲಿಸಾ’ ಸಿನಿಮಾಗೆ 20 ವರ್ಷಗಳು ಕಳೆದಿವೆ. ಈ ಸಿನಿಮಾದಲ್ಲಿ ಧ್ಯಾನ್ ನಟಿಸಿದ್ದರು. ಇದನ್ನು ತಂಡದವರು ಸಂಭ್ರಮಿಸಿಕೊಂಡಿದ್ದಾರೆ. ಧ್ಯಾನ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಶರಣ್, ದುನಿಯಾ ವಿಜಯ್ ಹಾಗೂ ಯಶ್ ಜೊತೆ ಕೆಲಸ ಮಾಡಿದ್ದೇನೆ. ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ನಾನು ನಟಿಸಿದ್ದೆ. ಅವರು ಪ್ಯಾನ್​ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಆಲ್​ ದಿ ಬೆಸ್ಟ್’ ಎಂದಿದ್ದಾರೆ. ಆ ಬಳಿಕ ದರ್ಶನ್ ಬಗ್ಗೆಯೂ ಧ್ಯಾನ್ ಮಾತನಾಡಿದ್ದಾರೆ. ‘ದರ್ಶನ್​ಗೆ ಗುಡ್​ಲಕ್’ ಎಂದಿರೋ ಅವರು ‘ಎಲ್ಲಾ ಸಮಸ್ಯೆಗಳೂ ಪರಿಹಾರ ಆಗುತ್ತವೆ ಎಂದು ನಾನು ಭಾವಿಸಿದ್ದೇನೆ’ ಎಂದಿದ್ದಾರೆ ಧ್ಯಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.