ಕಾಲುಂಗರ ಹಾಕಿಕೊಳ್ತಾರೆ ನಟಿ ರಜಿನಿ ಪತಿ ಅರುಣ್ 

Updated on: Apr 08, 2026 | 1:22 PM

‘ಅಮೃತವರ್ಷಿಣಿ’  ಧಾರಾವಾಹಿಯಲ್ಲಿ ನಟಿಸಿ ರಜಿನಿ ಅವರು ಗಮನ ಸೆಳೆದಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆಯಿತು. ಅವರು ಈಗ ಅರುಣ್ ಎಂಬ ವ್ಯಕ್ತಿಯನ್ನು ವಿವಾಹ ಆಗಿದ್ದಾರೆ. ಅವರ ಬಗ್ಗೆ ರಜಿನಿ ಮಾತನಾಡಿದ್ದಾರೆ. ಈ ವೇಳೆ ಕಾಲಿಗೆ ಉಂಗುರ ಹಾಕಿಕೊಳ್ಳುತ್ತಾರೆ ಎಂಬ ಅಚ್ಚರಿಯ ವಿಷಯ ರಿವೀಲ್ ಆಗಿದೆ. 

ಅರುಣ್ ಗೌಡ ಹಾಗೂ ಅಮೃತವರ್ಷಿಣಿ ರಜಿನಿ ವಿವಾಹ ಆಗಿದ್ದಾರೆ. ಅರುಣ್ ಫಿಟ್ನೆಸ್ ಟ್ರೇನರ್. ರಜಿನಿ ಹಾಗೂ ಅರುಣ್​​ಗೆ ಪರಿಚಯ ಆಗಿದ್ದು ಜಿಮ್ ಅಲ್ಲಿಯೇ. ಈಗ ಇಬ್ಬರೂ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಅರುಣ್ ಅವರು ಶೋನಲ್ಲಿ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ. ಅವರು ಕಾಲುಂಗರ ಧರಿಸುತ್ತಾರಂತೆ. ‘ಮಮ್ಮಿಗೆ (ರಜಿನಿ) ಕಮಿಟ್ ಆಗಿದ್ದೇನೆ ಎಂಬುದರ ಅರ್ಥ ಇದು’ ಎಂದು ಅರುಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More