ಬೆಂಗಳೂರುವರೆಗೆ ದನಕರುಗಳನ್ನು ಓಡಿಸಿಕೊಂಡು ಹೋಗ್ತಿದ್ದೆ, ಅದೆಲ್ಲ ಬೇಡ ಅಂತ ಸುಮ್ಮನಿದ್ದೇನೆ: ಡಿಕೆ ಶಿವಕುಮಾರ
ಆಂಜನೇಯ ರಾಮನ ಪರಮ ನಿಷ್ಠಾವಂತ ಸೇವಕನಾಗಿದ್ದ. ನಿಷ್ಠೆ ಮತ್ತು ಸೇವೆಯ ವಿಷಯ ಬಂದಾಗ ಆಂಜನೇಯನನ್ನು ನೆನೆಯಲಾಗುತ್ತದೆ. ಹಾಗಾಗೇ ಜನರ ಸೇವೆಗೆ ನಿಂತಿರುವ ನಾವು ಆಂಜನೇಯನಿಗೆ ಪೂಜೆ ಸಲ್ಲಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆಯ (Mekedatu Project) ಶೀಘ್ರ ಜಾರಿಗೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತ ಎರಡನೇ ದಿನದ ಪಾದಯಾತ್ರೆ ಆರಂಭಿಸುವ ಮೊದಲು ಕೆ ಪಿ ಸಿ ಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಬಾಣಂದೂರಿನ ಆಂಜನೇಯ ಮತ್ತು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಮುಂದೆ ಕುಳಿತಿರುವಾಗಲೇ ರಾಮನಗರ ಟಿವಿ9 ವರದಿಗಾರ ಡಿಕೆಶಿ ಅವರನ್ನು ಮಾತಾಡಿಸಿದರು. ಚುನಾವಣೆ ಮತ್ತು ವಿಶೇಷ ಸಂದರ್ಭಗಳಲ್ಲಿ ರಾಜಕಾರಣಿಗಳು ದೇವಸ್ಥಾನಗಳಿಗೆ ಎಡತಾಕುವುದನ್ನು ಮಾಧ್ಯಮಗಳು ಟೆಂಪಲ್ ರನ್ ಅಂತ ಹೇಳುವುದರ ಬಗ್ಗೆ ಶಿವಕುಮಾರ ಅವರಿಗೆ ಆಕ್ಷೇಪಣೆ ಇದೆ. ಮನೇಲಿ ಇರಬೇಕಾದರೆ, ಹೊರಗೆ ಕೆಲಸಕ್ಕೆ ಹೊರಡುವ ಮುನ್ನ ದೇವರಿಗೆ ಪೂಜೆ ಸಲ್ಲಿಸುವ ಹಾಗೆ ಎರಡನೇ ದಿನದ ಪಾದಯಾತ್ರೆಗೆ ಮೊದಲು ದೇವರ ದರ್ಶನ ಮಾಡಿದ್ದೇನೆ ಎಂದು ಹೇಳುವ ಅವರು ಬಾಣಂದೂರು ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರ ಜನ್ಮಸ್ಥಳ ಆಗಿದ್ದು ಅವರು ಸಹ ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವ ಮೊದಲು ಈ ಎರಡು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರು, ಅಂತ ಹೇಳಿದರು.
ರಾಮನ ತಂದೆ ದಶರಥನಿಗೆ ಎಲ್ಲೂ ದೇವಸ್ಥಾನಗಳಿಲ್ಲ ಅದರೆ ಅವನ ಬಂಟ ಆಂಜನೇಯನಿಗೆ ಪ್ರತಿ ಊರಲ್ಲೂ ದೇವಸ್ಥಾನವಿರುತ್ತದೆ. ಆಂಜನೇಯ ರಾಮನ ಪರಮ ನಿಷ್ಠಾವಂತ ಸೇವಕನಾಗಿದ್ದ. ನಿಷ್ಠೆ ಮತ್ತು ಸೇವೆಯ ವಿಷಯ ಬಂದಾಗ ಆಂಜನೇಯನನ್ನು ನೆನೆಯಲಾಗುತ್ತದೆ. ಹಾಗಾಗೇ ಜನರ ಸೇವೆಗೆ ನಿಂತಿರುವ ನಾವು ಆಂಜನೇಯನಿಗೆ ಪೂಜೆ ಸಲ್ಲಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
‘ಇನ್ನು ಬಸವೇಶ್ವರ, ರೈತರನ್ನು ಬದುಕಿಸುತ್ತಿರುವ ದೇವರು, ಆತನಿಗೆ ಪೂಜೆ ಮಾಡುವ ಮೊದಲು ಬೇರೆ ಕೆಲಸ ಮಾಡುವುದು ಸಾಧ್ಯವೇ? ಮನಸ್ಸು ಮಾಡಿದ್ದರೆ ಇಲ್ಲಿನ ಎಲ್ಲಾ ದನಕರುಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದೆ, ಅದೆಲ್ಲ ಬೇಡ ಅಂತ ಸುಮ್ಮನಾಗಿದ್ದೇನೆ,’ ಅಂತ ಶಿವಕುಮಾರ ಹೇಳಿದರು.
ಇದನ್ನೂ ಓದಿ: Mekedatu Padayatra 2.0 Live: ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು