ನೋಟೀಸ್​ಗೆ ಕೊಡುವ ಉತ್ತರದಲ್ಲೂ ನನ್ನ ಹೇಳಿಕೆಗೆ ಬದ್ಧ ಅಂತ ಹೇಳುತ್ತೇನೆ: ಇಕ್ಬಾಲ್ ಹುಸೇನ್, ಶಾಸಕ

Updated on: Jul 08, 2025 | 5:23 PM

ಕಾಂಗ್ರೆಸ್ ಪಕ್ಷ ರಾಜ್ಯಮಟ್ಟದ ಕಾರ್ಯದರ್ಶಿಗಳು ಶುಕ್ರವಾರದಂದಯ ರಾಮನಗರಕ್ಕೆ ಬರಲಿದ್ದಾರೆ, ಅವರ ಜೊತೆ ಉನ್ನತಮಟ್ಟದ ಅಧಿಕಾರಿಗಳು ಸಹ ಇಲ್ಲಿಗೆ ಬಂದು ಸಭೆ ನಡೆಸಲಿದ್ದಾರೆ, ಪ್ರತಿಸಲ ವಿಧಾನಸೌಧದಲ್ಲಿ ಮೀಟಿಂಗ್ ಮಾಡೋದ್ರಿಂದ ಪ್ರಯೋಜನವಿಲ್ಲ ಅಂತ ತಾನು ಮನವಿ ಮಾಡಿಕೊಂಡ ಕಾರಣ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಿಗಳ ತಂಡ ರಾಮನಗರಕ್ಕೆ ಬರುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಬೆಂಗಳೂರು ದಕ್ಷಿಣ, ಜುಲೈ 8: ನಗರಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅವರು ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ತನ್ನ ಹೇಳಿಕೆ ಈಗಲೂ ಬದ್ಧ ಎಂದು ಮತ್ತೊಮ್ಮೆ ಹೇಳಿದರು. ಇವತ್ತು ಕೆಪಿಸಿಸಿ ಅಧ್ಯಕ್ಷರು (KPCC president) ಕೊಟ್ಟಿರುವ ನೋಟೀಸ್​ಗೆ ಉತ್ತರ ಕೊಡಬೇಕಿದೆ, ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಕಾರ್ಯದರ್ಶಿಗಳಿ ನನ್ನ ಉತ್ತರಕ್ಕಾಗಿ ತಲೆಮೇಲೆ ಕೂತಿದ್ದಾರೆ, ಇವತ್ತು ಕೊನೇದಿನ ಎಂದು ಇಕ್ಬಾಲ್ ಹುಸೇನ್ ಹೇಳಿದರು. ಏನಂತ ಉತ್ತರ ಕೋಡ್ತೀರಾ ಅಂತ ಕೇಳಿದರೆ. ಶಿವಕುಮಾರ್​ಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬೇಕು ಎಂಬ ನನ್ನ ಹೇಳಿಕೆಗೆ ಯಾವತ್ತೂ ಬದ್ಧ, ಅದನ್ನು ಸಾರ್ವಜನಿಕವಾಗಿ ಚರ್ಚಿಬಾರದು ಅಂತ ಹೇಳಿದ್ದಾರೆ, ಆದರೆ ನೋಟೀಸ್​​ಗೆ ಕೊಡುವ ಉತ್ತರದಲ್ಲಿ ಮಾತ್ರ ಹೇಳಿಕೆಗೆ ಬದ್ಧ ಅಂತ ಹೇಳುತ್ತೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು

ಇದನ್ನೂ ಓದಿ:  ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 08, 2025 05:21 PM