ಸುರ್ಜೆವಾಲ ಬೆಂಗಳೂರಿನಲ್ಲಿ ಇರುವಾಗಲೇ ಸಿಎಂ ಬದಲಾವಣೆ ಮಾತು: ಶಾಸಕ ಇಕ್ಬಾಲ್ ಹುಸೇನ್ಗೆ ಶಾಕ್
ಕರ್ನಾಟಕ ಕಾಂಗ್ರೆಸ್ ನಲ್ಲಿ ಶಾಸಕರ ಅಸಮಾಧಾನದ ಕಿಚ್ಚು ಕಾವೇರುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಕಥೆ, ಮುನಿಸು, ಬೇಸರ. ಹೀಗಾಗಿ ಈ ಕಿಚ್ಚು ಮತ್ತಷ್ಟು ಸ್ಫೋಟಗೊಳ್ಳುವ ಮೊದಲೇ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರ ಅಸಮಾಧಾನ ತಣಿಸಲು ಬಂದಿದ್ದಾರೆ. ಆದ್ರೆ ಸುರ್ಜೇವಾಲ ಸಭೆ ಪಕ್ಷದ ನಾಯಕರ ಅಸಮಾಧಾನ ತಣಿಸೋ ಬದಲು ಬಹಿರಂಗ ಕಿತ್ತಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿ ಅಬ್ಬರಿಸಿದ್ದಾರೆ. ಹೀಗಾಗಿ ಇದೀಗ ಅವರಿಗೆ ಡಿಕೆಶಿ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, (ಜುಲೈ 01): ಕಾಂಗ್ರೆಸ್ ಶಾಸಕರ ಗೊಂದಲ, ಸಮಸ್ಯೆಗಳನ್ನು ನಿವಾರಿಸಲು ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿಗೆ ಆಗಮಿಸಿದ್ದು, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಶಾಸಕ ಜೊತೆ ಒನ್ ಟು ಒನ್ ಸಭೆ ಮಾಡಿ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನಾಯಕತ್ವ ಬದಲಾವಣೆ ಮಾತುಗಳನ್ನಾಡಿದ್ದಾರೆ. ಕ್ರಾಂತಿ ಹೇಳಿದವರೇ ಡೇಟ್ ಕೊಟ್ಟಿದ್ದಾರೆ, ಡಿಸಿಎಂ ಸಿಎಂ ಆಗುವ ಕಾಲ ಹತ್ತಿರ ಇದೆ. ಶಾಸಕರ ಸಂಖ್ಯಾಬಲವೂ ಇದೆ ಎಂದು ಬಾಂಬ್ ಹಾಕಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಾಯಕತ್ವ ಬದಲಾವಣೆ ಇಲ್ಲ. ಈ ರೀತಿ ಬಹಿರಂಗ ಹೇಳಿಕೆ ನೀಡಿದರೆ ಯಾರೇ ಆಗಲಿ ನೋಟಿಸ್ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೂ ಇಕ್ಬಾಲ್ ಹುಸೇನ್ ನೋಟಿಸ್ ಕ್ಯಾರೇ ಎನ್ನದೇ ಮತ್ತದೇ ಡಿಕೆಶಿ ಜಪ ಮಾಡಿದ್ದಾರೆ. ಇದರಿಂದ ಇದೀಗ ಸ್ವತಃ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
3 ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ಬಹಿರಂಗ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಅವರು ನೋಟಿಸ್ ನೀಡಿದ್ದಾರೆ. ಇಕ್ಬಾಲ್ ಹುಸೇನ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಇಕ್ಬಾಲ್ ಹುಸೇನ್ ಅವರ ಅಶಿಸ್ತಿನ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಒಂದು ವಾರದೊಳಗೆ ಸಮಜಾಯಿಷಿ ನೀಡುವಂತೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಶಿವಕುಮಾರ್ ನೋಟೀಸ್ ಜಾರಿ ಮಾಡ್ತೀನಿ ಅಂದಾಕ್ಷಣ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ!
ಸುರ್ಜೆವಾಲ ಎಚ್ಚರಿಕೆ ಬೆನ್ನಲ್ಲೇ ನೋಟಿಸ್
ಇನ್ನು ಇಕ್ಬಲ್ ಹುಸೇನ್ ಹೇಳಿಕೆ ಮುನ್ನ ಸಿದ್ದರಾಮಯ್ಯ ಡಿಕೆಶಿಯ ಕೈ ಎತ್ತಿ ಹಿಡಿದ ವಿಡಿಯೋ ಬಗ್ಗೆ ಸುರ್ಜೆವಾಲ ಪ್ರಸ್ತಾಪಿಸಿ, ನಾನು ವಿಡಿಯೋ ನೋಡಿದೆ. ಕೆಪಿಸಿಸಿ ಕಚೇರಿಯಲ್ಲಿ ತೋರಿಸಿದರು. ಒಳ್ಳೆಯ ಬೆಳವಣಿಗೆ. ನೀವಿಬ್ಬರು ಒಗ್ಗಟ್ಟು ಪ್ರದರ್ಶಿಸಿದ್ದು ಓಕೆ, ಆದರೆ ಕೆಲ ಮಿನಿಸ್ಟರ್ಸ್, ಶಾಸಕರು ಗೊಂದಲದ ಹೇಳಿಕೆಗಳು ಯಾಕೆ? ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.
ಮೊದಲು ಬಹಿರಂಗವಾಗಿ ಹೇಳಿಕೆ ಕೊಡುವವರನ್ನ ಸರಿಮಾಡಬೇಕಿದೆ. ನೀವು ನಿಮ್ಮ ಆಪ್ತರನ್ನ ಎಂಟರ್ಟೈನ್ ಮಾಡಬೇಡಿ. ಆಪ್ತರಿಗೆ ನೀವು ಬುದ್ಧಿ ಹೇಳಿ ಎಂದಿರುವ ಸುರ್ಜೆವಾಲ, ನಾವು ವಾರ್ನ್ ಮಾಡುತ್ತೇವೆ. ನಾವು ಎಂಟರ್ಟೈನ್ ಮಾಡಲ್ಲ ಎಂದು ಸಿಎಂ, ಡಿಸಿಎಂಗೆ ಖಡಕ್ ಆಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಶಾಸಕ ಇಕ್ಬಾಳ್ ಹುಸೇನ್ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಜೊತೆ ನನ್ನ ಕ್ಷೇತ್ರದ ಅಭಿವೃದ್ದಿ ಬಗ್ಗೆ ನಾನು ಹೇಳುತ್ತೇನೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು. ಪಕ್ಷ ಸಂಘಟನೆ ಮಾಡಿದ್ದಾರೆ. ಇತಿಹಾಸದ ಪುಟ್ಟದಲ್ಲಿ ಬರೆದಿದ್ದಾರೆ. ಸರ್ಕಾರ ಬರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರಿಗೂ ಗೊತ್ತಿದೆ. ಎಲ್ಲ ಶಾಸಕರು ಬೆಂಬಲ ಕೊಡುತ್ತಾರೆ. ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ಸಾಕಷ್ಟು ಶಾಸಕರು ಬದಲಾವಣೆ ಬೇಕು ಅಂತಿದ್ದಾರೆ. ನಾನು ಕೈ ಜೋಡಿಸಿದ್ದೇನೆ ಎಂದು ಹೇಳಿದ್ದರು.
ಸೆಪ್ಟೆಂಬರ್ ನಲ್ಲಿ ಕ್ರಾಂತಿ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಕಾಂತ್ರಿ ಅಲ್ಲ ಇದು ಬದಲಾವಣೆ. ಇದು ಸಂಘಟನಕಾರ, ಹೋರಾಟಗಾರನಿಗೆ ಕೊಡುವ ಅವಕಾಶ. ಕಾಂಗ್ರೆಸ್ ಬಿದ್ದು ಬಿಜೆಪಿ ಬಂದರೆ ಕಾಂತ್ರಿ ಅನ್ನುತ್ತೇವೆ. ಇದು ಬದಲಾವಣೆ ಅಷ್ಟೇ ಇದು ಕಾಂತ್ರಿ ಅಲ್ಲ. ಈ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಸಿಎಂ ಆಗಬೇಕು ಎಂಬುದೇ ನಮ್ಮ ಅಭಿಲಾಷೆ ಎಂದಿದ್ದರು.