ಎರಡು ಹೊತ್ತು ಊಟ ಇಲ್ಲದಷ್ಟು ಬಡತನದಲ್ಲಿ ಬೆಳೆದು IAS ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ

Edited By:

Updated on: Nov 25, 2025 | 9:51 PM

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನಕ್ಕೆ ಅವರ ಹುಟ್ಟೂರು ಬೆಳಗಾವಿಯ ರಾಮದುರ್ಗ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ. ಕಡು ಬಡತನದಿಂದ ಬೆಳೆದು, ಅಸಾಧಾರಣ ಶ್ರಮದಿಂದ ಕೆಎಎಸ್‌ನಲ್ಲಿ ನಾಲ್ಕನೇ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದ ಮಹಾಂತೇಶ್, ಇಂದು ಇನ್ನಿಲ್ಲ. ಅವರ ಗುರುಗಳು, ಬಂಧುಗಳು ಹಾಗೂ ಸ್ಥಳೀಯರು 'ಚಿನ್ನದ ಹುಡುಗ'ನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಬೆಳಗಾವಿ, ನವೆಂಬರ್ 25: ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ ಹುಟ್ಟೂರಿನಲ್ಲ ನೀರವ ಮೌನ ಆವರಿಸಿದೆ. ಮಹಾಂತೇಶ್ ನಿವಾಸದ ಎದುರು ಸಂಬಂಧಿಕರು, ಜನರು ಜಮಾವಣೆಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.