IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು: ಆ ದಿನಗಳನ್ನ ನೆನೆದು ಕಣ್ಣೀರಿಟ್ಟ ಕಲಿಸಿದ ಗುರು
IAS ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಬಳಿಕ ಐಎಎಸ್ ಆಗಿ ಪದನ್ನೊತಿ ಪಡೆದುಕೊಂಡು ದಕ್ಷ ಹಾಗೂ ಜನಸ್ನೇಹಿ ಅಧಿಕಾರಿಯಾಗಿದ್ದರು. ಈಗ ಓರ್ವ ಸರಳ, ಸಜ್ಜನಿಕೆ ಅಧಿಕಾರಿಯಯನ್ನು ಕಳೆದುಕೊಂಡು ಕರ್ನಾಟಕವೇ ಮಮ್ಮಲ ಮರುಗುತ್ತಿದೆ.
ಬೆಳಗಾವಿ, (ನವೆಂಬರ್ 25): IAS ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಬಳಿಕ ಐಎಎಸ್ ಆಗಿ ಪದನ್ನೊತಿ ಪಡೆದುಕೊಂಡು ದಕ್ಷ ಹಾಗೂ ಜನಸ್ನೇಹಿ ಅಧಿಕಾರಿಯಾಗಿದ್ದರು. ಈಗ ಓರ್ವ ಸರಳ, ಸಜ್ಜನಿಕೆ ಅಧಿಕಾರಿಯಯನ್ನು ಕಳೆದುಕೊಂಡು ಕರ್ನಾಟಕವೇ ಮಮ್ಮಲ ಮರುಗುತ್ತಿದೆ. ಸಿಎಂ ,ಡಿಸಿಎಂ , ಕೇಂದ್ರ ಸಚಿವರು, ಶಾಸಕರು ಮಹಾಂತೇಶ್ ಬೀಳಗಿ ಸಂತಾಪ ಸೂಚಿಸಿದ್ದಾರೆ. ಇನ್ನು ಮಹಾಂತೇಶ್ ಬೀಳಗಿ ಅವರ ಊರಿನಲ್ಲಿ ನೀರವ ಮೌನ ಆವರಿಸಿದ್ದು, ಗ್ರಾಮದ ಪುತ್ರನನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ. ಇನ್ನು ಕಲಿಸಿದ್ದ ಗುರುಗಳು ಸಹ ಮಹಾಂತೇಶ್ ಬೀಳಗಿ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದು, ಹಿಂದಿನ ನೆನಪುಗಳನ್ನು ಮೆಲುಕು ಹಾಕಿ ಕಣ್ಣೀರಿಟ್ಟಿದ್ದಾರೆ.

