ವಿಶ್ವಕಪ್ ಫೈನಲ್​​ಕ್ಕೂ ಮುನ್ನ ಭಾರತೀಯ ವಾಯುಪಡೆ ಸಮರಾಭ್ಯಾಸ: ರೋಮಾಂಚನಕಾರಿ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

|

Updated on: Nov 17, 2023 | 8:09 PM

ಭಾನುವಾರ (ನ. 19) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಐಸಿಸಿ ವಿಶ್ವಕಪ್​ ಅಂತಿಮ ಪಂದ್ಯ ನಡೆಯಲಿದೆ. ಅಂತಿಮ ಪಂದ್ಯಕ್ಕಾಗಿ ಕ್ರೀಡಾಂಗಣವು ಸಜ್ಜಾಗುತ್ತಿರುವ ವಿಡಿಯೋ ಇದ್ದಾಗಿದ್ದು, ಭಾರತೀಯ ವಾಯುಪಡೆ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಮಹೀಂದ್ರಾ ಗ್ರೂಪ್‌ ಚೇರ್‌ಮನ್‌ ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದು, ರೋಮಾಂಚನಕಾರಿ ಆಗಿದೆ ಎಂದಿದ್ದಾರೆ.

ಭಾನುವಾರ (ನ. 19) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಐಸಿಸಿ ವಿಶ್ವಕಪ್​ (ICC World Cup 2023) ಅಂತಿಮ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುಂಚೆ ಏರ್ ಶೋಗಾಗಿ ಭಾರತೀಯ ವಾಯುಪಡೆ (ಐಎಎಫ್) ಅಭ್ಯಾಸ ಮಾಡುತ್ತಿರುವ ಅದ್ಭುತ ವಿಡಿಯೋ ಒಂದನ್ನು ಮಹೀಂದ್ರಾ ಗ್ರೂಪ್‌ ಚೇರ್‌ಮನ್‌ ಆನಂದ್‌ ಮಹೀಂದ್ರಾ (Anand Mahindra) ತಮ್ಮ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ‘ಸ್ಪಾಯ್ಲರ್ ಎಚ್ಚರಿಕೆ! ವಿಶ್ವಕಪ್ ಫೈನಲ್‌ಗಾಗಿ ಭಾರತೀಯ ವಾಯುಪಡೆ ಅಭ್ಯಾಸ ಮಾಡುತ್ತಿರುವ ಈ ವಿಡಿಯೋವನ್ನು ಮಹೀಂದ್ರಾ ಇನ್ನೋವೇಶನ್ ಸೆಂಟರ್‌ನ ಮೇಲ್ವಿಚಾರಣೆ ನಡೆಸುತ್ತಿರುವ ನನ್ನ ಸಹೋದ್ಯೋಗಿ ಮನೀಶ್ ಉಪಾಧ್ಯಾಯ ಅವರು ಕಳುಹಿಸಿದ್ದು, ರೋಮಾಂಚನ ಉಂಟು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಅಂತಿಮ ಪಂದ್ಯಕ್ಕಾಗಿ ಕ್ರೀಡಾಂಗಣವು ಸಜ್ಜಾಗುತ್ತಿರುವ ವಿಡಿಯೋ ಇದ್ದಾಗಿದ್ದು, ಭಾರತೀಯ ವಾಯುಪಡೆ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಿನ್ನೆಲೆ ಸಂಗೀತ ಕೇಳಬಹುದಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: Nov 17, 2023 08:09 PM