‘ಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಚೆಂಡನ್ನು ಹೊಡೆಯಿರಿ’: ಭಾರತ ತಂಡಕ್ಕೆ ಸದ್ಗುರು ಸಲಹೆ

ICC World Cup 2023: ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡದ ವಿಶ್ವಕಪ್​ ಫೈನಲ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಭಾರತ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಇದರ ಮಧ್ಯೆ ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರು ಭಾರತ ತಂಡ ವಿಶ್ವಕಪ್​ ಫೈನಲ್​ ಗೆಲ್ಲಲು ಸರಳ ಸಲಹೆ ನೀಡಿದ್ದಾರೆ. 

‘ಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಚೆಂಡನ್ನು ಹೊಡೆಯಿರಿ’: ಭಾರತ ತಂಡಕ್ಕೆ ಸದ್ಗುರು ಸಲಹೆ
ಸದ್ಗುರು
Follow us
|

Updated on:Nov 17, 2023 | 7:23 PM

ಭಾರತ ಕ್ರಿಕೆಟ್ ತಂಡ (India Cricket Team) 10 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 2023ರ ವಿಶ್ವಕಪ್​ ಫೈನಲ್ ಪ್ರವೇಶಿಸಿದೆ. ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಭಾನುವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ಸೆಣಸಾಡಲಿದೆ. ಫೈನಲ್​ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಭಾರತ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಇದರ ಮಧ್ಯೆ ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರು ಭಾರತ ತಂಡ ವಿಶ್ವಕಪ್​ ಫೈನಲ್​ ಗೆಲ್ಲಲು ಸರಳ ಸಲಹೆ ನೀಡಿದ್ದಾರೆ.

ಭಾರತ ತಂಡ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿರುವ ಈ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್​ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅದರಲ್ಲಿ ಓರ್ವ ವ್ಯಕ್ತಿ ವಿಶ್ವಕಪ್​ ಗೆಲ್ಲಲು ಭಾರತ ತಂಡಕ್ಕೆ ಸಲಹೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸದ್ಗುರು, ‘ಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಚೆಂಡನ್ನು ಹೊಡೆಯಿರಿ’ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ 450/2, ಭಾರತ 65ಕ್ಕೆ ಆಲ್‌ಔಟ್: ಫೈನಲ್​ ಪಂದ್ಯದ ಬಗ್ಗೆ ಭವಿಷ್ಯ ನುಡಿದ ಮಿಚೆಲ್‌ ಮಾರ್ಷ್‌!

1 ಶತಕೋಟಿ ಜನರು ಕಪ್‌ಗಾಗಿ ಕಾಯುತ್ತಿರುವುದಾಗಿ ನೀವು ಯೋಚಿಸಿದರೆ, ನೀವು ಚೆಂಡನ್ನು ಕಳೆದುಕೊಳ್ಳುತ್ತೀರಿ ಅಥವಾ ನೀವು ವಿಶ್ವಕಪ್ ಗೆದ್ದರೆ ಆಗುವ ಎಲ್ಲಾ ಇತರೆ ಕಾಲ್ಪನಿಕ ಸಂಗತಿಗಳ ಬಗ್ಗೆ ಯೋಚಿಸುತ್ತ ಕುಳಿತರೆ, ಚೆಂಡು ನಿಮ್ಮ ವಿಕೆಟ್​ನ್ನು ಉರುಳಿಸುತ್ತದೆ ಎಂದಿದ್ದಾರೆ.

View this post on Instagram

A post shared by Sadhguru (@sadhguru)

ಹಾಗಾಗಿ ವಿಶ್ವಕಪ್ ಗೆಲ್ಲುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಡಿ. ಚೆಂಡನ್ನು ಹೊಡೆಯುವುದು ಹೇಗೆ? ಎದುರಾಳಿ ತಂಡದ ವಿಕೆಟ್‌ಗಳನ್ನು ಉರುಳಿಸುವುದು ಹೇಗೆ ಎಂಬುವುದನ್ನು ಮಾತ್ರ ನೀವು ಯೋಚಿಸಬೇಕು. ವಿಶ್ವಕಪ್ ಬಗ್ಗೆ ಯೋಚಿಸಬೇಡಿ. ಆಗ ನೀವು ವಿಶ್ವಕಪ್‌ನಿಂದ ಹೊರಗುಳಿಯುತ್ತೀರಿ ಎಂದು ಭಾರತ ತಂಡಕ್ಕೆ ಸದ್ಗುರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಐಸಿಸಿ ವಿಶ್ವಕಪ್ ಫೈನಲ್: ವಿಮಾನಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಅಹ್ಮದಾಬಾದ್​ಗೆ ಫ್ಲೈಟ್ ಬೆಲೆ ಗಗನಕ್ಕೆ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ಸದ್ಗುರು ಶುಭಕೋರಿದ್ದರು. ಈ ಕುರಿತಾಗಿ ತಮ್ಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ ಅವರು, ‘ ಸತತ ಪ್ರಯತ್ನದಿಂದ ಯಾರೂ ಬೇಕಾದರು ಪರಿಣಾಮವಾಗಿ ಕೆಲಸ ಮಾಡಬಹುದು. ಪ್ರಕ್ರಿಯೆಯು ದೈನಂದಿನ ನಡೆಯುತ್ತಿರುವ ವಿಷಯವಾಗಿದೆ. ಯಶಸ್ಸು ಇತರೆ ಜನರ ದೃಷ್ಟಿಯಲ್ಲಿ ಮಾತ್ರ. ನೀವು ಯಶಸ್ವಿ ಅಥವಾ ವಿಫಲರಾಗಿದ್ದೀರಿ ಎಂದು ಅವರು ಭಾವಿಸುತ್ತಾರೆ. ಆದರೆ ಮೂಲಭೂತವಾಗಿ, ನೀವು ಮಾಡುತ್ತಿರುವುದು ಪ್ರಕ್ರಿಯೆ ಸರಿ ಎಂದು ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:20 pm, Fri, 17 November 23

ತಾಜಾ ಸುದ್ದಿ
Telangana Assembly Polls: ಹೈದರಾಬಾದ್​ನಲ್ಲಿ ಮತ ಚಲಾಯಿಸಿದ ಚಿರಂಜೀವಿ
Telangana Assembly Polls: ಹೈದರಾಬಾದ್​ನಲ್ಲಿ ಮತ ಚಲಾಯಿಸಿದ ಚಿರಂಜೀವಿ
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ