ಐಸಿಸಿ ವಿಶ್ವಕಪ್ ಫೈನಲ್: ವಿಮಾನಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಅಹ್ಮದಾಬಾದ್ಗೆ ಫ್ಲೈಟ್ ಬೆಲೆ ಗಗನಕ್ಕೆ
Flight Ticket Prices To Ahmedabad: ನವೆಂಬರ್ 19ಕ್ಕೆ ಫೈನಲ್ ಪಂದ್ಯ ಇದೆ. ವೀಕೆಂಡ್ನಲ್ಲಿ ದೇಶದ ವಿವಿಧ ಭಾಗಗಳಿಂದ ಅಹ್ಮದಾಬಾದ್ಗೆ ಹೆಚ್ಚುವರಿ ಫ್ಲೈಟ್ಗಳನ್ನು ನಿಯೋಜಿಸಲಾಗಿದೆ. ಆದರೂ ಫ್ಲೈಟ್ ಬೆಲೆ ಗಗನಕ್ಕೇರಿದೆ. ಇಂದು ನವೆಂಬರ್ 17 ಮತ್ತು ನಾಳೆ ನವೆಂಬರ್ 18ಕ್ಕೆ ಅಹ್ಮದಾಬಾದ್ಗೆ ಹೋಗುವ ಎಲ್ಲಾ ಫ್ಲೈಟ್ಗಳಿಗೆ ಡಿಮ್ಯಾಂಡ್ ಬಹಳ ಹೆಚ್ಚಿದೆ. ಬೆಂಗಳೂರಿನಿಂದ ಅಹ್ಮದಾಬಾದ್ಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಬೆಲೆ 1.6 ಲಕ್ಷ ರೂವರೆಗೂ ಇದೆ.
ಬೆಂಗಳೂರು, ನವೆಂಬರ್ 17: ಭಾರತ ಕ್ರಿಕೆಟ್ ತಂಡ (India Cricket Team) ಒಂದೂ ಸೋಲಿಲ್ಲದೇ ಐಸಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ವಿಶ್ವಕಪ್ ಉದ್ಘಾಟನೆ ನಡೆದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಫೈನಲ್ ಪಂದ್ಯವೂ ನಡೆಯಲಿದೆ. ಭಾರತ ಮೂರನೇ ಬಾರಿ ಚಾಂಪಿಯನ್ ಆಗಲು ಪ್ರಯತ್ನಿಸಿದರೆ, ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿ ಚಾಂಪಿಯನ್ ಪಟ್ಟಕ್ಕೆ ಕಣ್ಣಿಟ್ಟಿದೆ. 1.32 ಲಕ್ಷ ಪ್ರೇಕ್ಷಕರಿಗೆ ಸ್ಥಳಾವಕಾಶ ಈ ಸ್ಟೇಡಿಯಂನಲ್ಲಿದ್ದು, ಅಂತೆಯೇ ಸಾಕಷ್ಟು ಜನರು ದೇಶದ ವಿವಿಧೆಡೆಯಿಂದ ಅಹ್ಮದಾಬಾದ್ಗೆ ಬರಲಿದ್ದಾರೆ. ವಿಮಾನ ಟಿಕೆಟ್ಗಳಿಗೆ (flight ticket) ಹಿಂದೆಂದಿಗಿಂತಲೂ ಡಿಮ್ಯಾಂಡ್ ಏರ್ಪಟ್ಟಿದೆ.
ನವೆಂಬರ್ 19ಕ್ಕೆ ಫೈನಲ್ ಪಂದ್ಯ ಇದೆ. ವೀಕೆಂಡ್ನಲ್ಲಿ ದೇಶದ ವಿವಿಧ ಭಾಗಗಳಿಂದ ಅಹ್ಮದಾಬಾದ್ಗೆ ಹೆಚ್ಚುವರಿ ಫ್ಲೈಟ್ಗಳನ್ನು (additional flight) ನಿಯೋಜಿಸಲಾಗಿದೆ. ಆದರೂ ಫ್ಲೈಟ್ ಬೆಲೆ ಗಗನಕ್ಕೇರಿದೆ. ಇಂದು ನವೆಂಬರ್ 17 ಮತ್ತು ನಾಳೆ ನವೆಂಬರ್ 18ಕ್ಕೆ ಅಹ್ಮದಾಬಾದ್ಗೆ ಹೋಗುವ ಎಲ್ಲಾ ಫ್ಲೈಟ್ಗಳಿಗೆ ಡಿಮ್ಯಾಂಡ್ ಬಹಳ ಹೆಚ್ಚಿದೆ.
ಇದನ್ನೂ ಓದಿ: ಮಿಂಚುತ್ತಿದೆ ‘ಬ್ರ್ಯಾಂಡ್’ ಶಮಿ; ಜಾಹೀರಾತಿಗಾಗಿ ಎಡೆತಾಕುತ್ತಿರುವ ಕಂಪನಿಗಳು; ಮೊಹಮ್ಮದ್ ಶಮಿಗೆ ಹರಿದುಬರುತ್ತಿದೆ ಹಣದ ಹೊಳೆ
ಮೇಕ್ ಮೈ ಟ್ರಿಪ್ ಪ್ಲಾಟ್ಫಾರ್ಮ್ನಲ್ಲಿರುವ ಮಾಹಿತಿ ಪ್ರಕಾರ ಇಂದು ನವೆಂಬರ್ 17ರಂದು ಬೆಂಗಳೂರಿನಿಂದ ಅಹ್ಮದಾಬಾದ್ಗೆ ಫ್ಲೈಟ್ ಬೆಲೆ 20,577 ರೂನಿಂದ ಆರಂಭವಾಗುತ್ತದೆ. 80,000 ರೂವರೆಗೂ ಟಿಕೆಟ್ ಬೆಲೆ ಇದೆ.
ಇನ್ನು, ನವೆಂಬರ್ 18, ಶನಿವಾರದಂದು ಬೆಂಗಳೂರಿನಿಂದ ಅಹ್ಮದಾಬಾದ್ಗೆ ಫ್ಲೈಟ್ ಟಿಕೆಟ್ ಬೆಲೆ 18,000 ರೂನಿಂದ ಆರಂಭವಾಗಿ 47,000 ರೂವರೆಗೂ ಇದೆ.
ಈ ಮೇಲಿನವು ಎಕನಾಮಿ ಕ್ಲಾಸ್ನ ಫ್ಲೈಟ್ ಬೆಲೆ. ಬಿಸಿನೆಸ್ ಕ್ಲಾಸ್ ಟಿಕೆಟ್ ಬೇಕೆಂದರೆ ಇನ್ನೂ ಹೆಚ್ಚಿದೆ. ನವೆಂಬರ್ 18ರಂದು ಬೆಂಗಳೂರಿನಿಂದ ಅಹ್ಮದಾಬಾದ್ಗೆ ಬಿಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್ ಬೆಲೆ 52,000 ರೂನಿಂದ ಆರಂಭವಾಗಿ 1,60,000 ರೂವರೆಗೂ ಇದೆ.
ಇದನ್ನೂ ಓದಿ: Explained: ಇಸ್ರೇಲ್ ಯುದ್ಧದ ಮಧ್ಯೆಯೂ ಕಚ್ಛಾ ತೈಲ ಬೆಲೆ ಇಳಿದಿರುವುದು ಯಾಕೆ? ಇಲ್ಲಿವೆ ಕಾರಣಗಳು
ಇನ್ನು, ಇವತ್ತು (ನ. 17) ಬೆಂಗಳೂರಿನಿಂದ ಅಹ್ಮದಾಬಾದ್ಗೆ ಫ್ಲೈಟ್ ಹತ್ತುವುದಾದರೆ ಟಿಕೆಟ್ ಬೆಲೆ 1 ಲಕ್ಷ ರೂನಿಂದ ಆರಂಭವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ