ಸಂತೋಷ ಕುಟುಂಬ ದುಃಖಸಾಗರದಲ್ಲಿ ಮುಳುಗಿದ್ದರೆ, ಈಶ್ವರಪ್ಪ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 14, 2022 | 5:29 PM

ತಾನು ಮಾಡಿದ ಕಾಮಗಾರಿಯ ಬಿಲ್ ಕ್ಲೀಯರ್ ಮಾಡಲು ಈಶ್ವರಪ್ಪ ಶೇಕಡ 40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಅಂತ ಸಂತೋಷ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು. ಸಂತೋಷ ಸಾವಿನ ಬಗ್ಗೆ ಮೋದಿಯವರು ಡಿಸ್ಟರ್ಬ್ ಆಗಿದ್ದಾರೆ ಪಾರ್ಟಿ ಮೂಲಗಳೇ ಹೇಳಿವೆ.

ಬದುಕಿನ ವಿಡಂಬನೆಗಳೇ ಹಾಗಿರುತ್ತವೆ. ಒಬ್ಬರಿಗೆ ಹರ್ಷ ಮತ್ತೊಬ್ಬರಿಗೆ ದುಃಖ. ಆದರೆ, ಸಂತೋಷಪಡುತ್ತಿರುವವರು ಮತ್ತು ದುಃಖದ ಮಡುವಿನಲ್ಲಿರುವವರ ನಡುವೆ ಸಂಬಂಧವಿರದೆ ಹೋಗಿದ್ದರೆ, ನಾವು ಈ ವಿಡಿಯೋವನ್ನು ನಿಮಗೆ ತೋರಿಸುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ವಿಡಿಯೋದ ಎಡಭಾಗದಲ್ಲಿ ಮೊನ್ನೆ ಉಡುಪಿಯ (Udupi) ಹೋಟೆಲೊಂದರಲ್ಲಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ ಪಾಟೀಲ (Santsoh Patil) ಅವರ ಅಂತ್ಯಕ್ರಿಯೆ ಅವರ ತವರೂರಿನಲ್ಲಿ ನಡೆಯುತ್ತಿರುವುದು ಕಾಣುತ್ತಿದೆ. ಮೃತರ ಪತ್ನಿ (wife), ತಾಯಿ (mother), ಅಣ್ಣತಮ್ಮಂದಿರು ಮತ್ತು ಬಂಧುಬಳಗದವರ ರೋದನೆ, ಆಕ್ರಂದನ ಮುಗಿಲು ಮುಟ್ಟಿದೆ. ಸಂತೋಷ ತಾಯಿ ಮತ್ತು ಪತ್ನಿಯ ಸಂಕಟ ನೋಡಲಾಗಲ್ಲ. ಈ ದುಃಖ ಮತ್ತು ನೋವು ಕೆಲದಿನಗಳ ಬಳಿಕ ಕಡಿಮೆ ಆಗುವಂಥದಲ್ಲ. ಅವರನ್ನು ಬದುಕಿನಿಡೀ ಕಾಡುವ ನೋವು ಅದು.

ಮತ್ತೊಂದೆಡೆ ರಾಜ್ಯದ ಗ್ರಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಅತ್ಯಂತ ರಿಲ್ಯಾಕ್ಸ್ಡ್ ಮೂಡಲ್ಲಿ ಹರ್ಷಚಿತ್ತರಾಗಿ ಪೇಪರ್ ಓದುತ್ತಾ ತಮ್ಮ ಬೆಂಬಲಿಗರೊಂದಿಗೆ ಹರಟುತ್ತಾ ಕೂತಿದ್ದಾರೆ. ಸಂತೋಷ ಸತ್ತಿರುವ ಬಗ್ಗೆ ಸಚಿವರ ಮುಖದಲ್ಲಿ ಒಂದಿಷ್ಟೂ ಬೇಸರ ಕಾಣುತ್ತಿಲ್ಲ ಮಾರಾಯ್ರೇ. ಸಂತೋಷ ಬಿಜೆಪಿ ಕಾರ್ಯಕರ್ತರಾಗಿದ್ದರು ಅಂತ ಅವರಿಗೆ ಗೊತ್ತಿದೆ. ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ತನ್ನ ಸಾವಿಗೆ ಈಶ್ವರಪ್ಪನವರೇ ನೇರ ಹೊಣೆ ಸಂತೋಷ ಸಾಯುವ ಮುನ್ನ ಹೇಳಿದ್ದಾರೆ.

ತಾನು ಮಾಡಿದ ಕಾಮಗಾರಿಯ ಬಿಲ್ ಕ್ಲೀಯರ್ ಮಾಡಲು ಈಶ್ವರಪ್ಪ ಶೇಕಡ 40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಅಂತ ಸಂತೋಷ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು. ಸಂತೋಷ ಸಾವಿನ ಬಗ್ಗೆ ಮೋದಿಯವರು ಡಿಸ್ಟರ್ಬ್ ಆಗಿದ್ದಾರೆ ಪಾರ್ಟಿ ಮೂಲಗಳೇ ಹೇಳಿವೆ. ಆದರೆ, ಸಂತೋಷ ಸಾವಿನ ಕೇಂದ್ರ ಬಿಂದುವಾಗಿರುವ ಈಶ್ವರಪ್ಪ ಮಾತ್ರ ವಿಚಲಿತರಾಗಿಲ್ಲ.

ಆಫ್ ಕೋರ್ಸ್, ಸತ್ಯಾಂಶ ಏನು ಅನ್ನೋದು ತನಿಖೆ ಮುಗಿದ ಬಳಿಕವೇ ಗೊತ್ತಾಗಲಿದೆ, ಆದರೆ ಈಶ್ವರಪ್ಪನವರ ಹೆಸರನ್ನು ಸಂತೋಷ ಪದೇಪದೆ ಉಲ್ಲೇಖಿಸಿರುವುದರಿಂದ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ. ವಿಷಯ ಅಷ್ಟೇ. ಮಿಕ್ಕಿದ್ದು ತನಿಖೆಯ ಬಳಿಕ ಗೊತ್ತಾಗಲಿದೆ.

ಇದನ್ನೂ ಓದಿ:   ಗುತ್ತಿಗೆದಾರ ಸಂತೋಷ್ ಪಾಟೀಲ್-ಈಶ್ವರಪ್ಪ ಭೇಟಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬೈಲಹೊಂಗಲ ಆರಾದಿಮಠದ ಮಹಾಂತೇಶ