ಗುತ್ತಿಗೆದಾರ ಸಂತೋಷ್ ಪಾಟೀಲ್-ಈಶ್ವರಪ್ಪ ಭೇಟಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬೈಲಹೊಂಗಲ ಆರಾದಿಮಠದ ಮಹಾಂತೇಶ

ಗುತ್ತಿಗೆದಾರ ಸಂತೋಷ್ ಪಾಟೀಲ್-ಈಶ್ವರಪ್ಪ ಭೇಟಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬೈಲಹೊಂಗಲ ಆರಾದಿಮಠದ ಮಹಾಂತೇಶ
ಗುತ್ತಿಗೆದಾರ ಸಂತೋಷ್ ಪಾಟೀಲ್-ಈಶ್ವರಪ್ಪ ಭೇಟಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬೈಲಹೊಂಗಲ ಆರಾದಿಮಠದ ಮಹಾಂತೇಶ

ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ‌ ಅವರು ಸಚಿವ ಈಶ್ವರಪ್ಪ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಭೇಟಿ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

TV9kannada Web Team

| Edited By: Ayesha Banu

Apr 14, 2022 | 3:19 PM

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ(Santosh Patil Suicide) ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ದಿನ ಪ್ರತಿಕ್ರಿಯೆ ನೀಡಿದ್ದ ಸಚಿವ ಈಶ್ವರಪ್ಪ(KS Eshwarappa), ನನಗೆ ಸಂತೋಷ್ ಭೇಟಿಯೇ ಆಗಿಲ್ಲಾ ಎಂದಿದ್ದರು. ಸದ್ಯ ಇವರ ಭೇಟಿಗೆ ಸಾಕ್ಷಿ ಎಂಬಂತೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಸಂತೋಷ್ ಹಾಗೂ ಈಶ್ವರಪ್ಪ ಭೇಟಿಗೆ ಸಾಕ್ಷಿಯಾದ ಸ್ವಾಮೀಜಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ‌ ಅವರು ಸಚಿವ ಈಶ್ವರಪ್ಪ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಭೇಟಿ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈಶ್ವರಪ್ಪರನ್ನು ಸಂತೋಷ್‌ ಪಾಟೀಲ್‌ ಭೇಟಿಯಾಗಿದ್ದು ನಿಜ ಎಂದು ಮಹಾಂತೇಶ ಶಾಸ್ತ್ರಿ‌ ಮಾಹಿತಿ ನೀಡಿದ್ದಾರೆ. 21 ಫೆಬ್ರವರಿ 2021ರಂದು ಈಶ್ವರಪ್ಪ ಅವರನ್ನ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲು ಕೆಲವು ಪುರೋಹಿತರ ಜತೆಗೆ ಹೋಗಿದ್ದೆ. ಸಂತೋಷ್ ಪಾಟೀಲ್ ಯಾರು ಅಂತಾ ನನಗೆ ಗೊತ್ತಿಲ್ಲ.ನನ್ನಾ ನೋಡಿ ನೀವು ಬೈಲಹೊಂಗಲದ ಸ್ವಾಮೀಜಿ ಅಂತಾ ಸಂತೋಷ್ ಕೇಳಿದ್ರು. ಆಗ ನಾನು ಹೌದು ಅಂತಾ ಹೇಳಿದೆ ಒಂದು ಫೋಟೋ ತೆಗೆಸಿಕೊಳ್ಳೋಣ ಅಂತಾ ಹೇಳಿದ್ರು. ನಮ್ಮ ಪುರೋಹಿತರೊಂದಿಗೆ ಸಚಿವರ ಜತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ. ಅರ್ಧ ಭಾಗ ಮಾತ್ರ ಕಟ್ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಪುರೋಹಿತರೊಂದಿಗೆ ಸಚಿವರ ಜತೆಗೆ ನಿಂತ ಪೋಟೋ ಕಟ್ ಮಾಡಿದ್ದಾರೆ. ಒಂದು ಕಡೆ ಫೋಟೋ ನೀಡಿ ನಾನೇ ಕರೆದುಕೊಂಡು ಹೋಗಿದ್ದೆ ಅಂತಿರುವುದು ಸುಳ್ಳು ಎಂದು ಮಹಾಂತೇಶ ಶಾಸ್ತ್ರಿ‌ ಅವರು ತಿಳಿಸಿದ್ದಾರೆ. ಅಲ್ಲದೆ ಈಶ್ವರಪ್ಪ ಜತೆ ಎಲ್ಲರೊಟ್ಟಿಗೆ ಇರುವ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಈಶ್ವರಪ್ಪರವರನ್ನ ಸಂತೋಷ್ ಭೇಟಿಯಾಗಿ ಪೋಟೋ ತೆಗೆಸಿಕೊಂಡಿದ್ದನ್ನ ಮಹಾಂತೇಶ ಶಾಸ್ತ್ರಿ ಸ್ವಾಮೀಜಿ ಖಚಿತ ಪಡೆಸಿದ್ದಾರೆ.

ಸಂತೋಷ್ ಕೆಲಸ ಮಾಡಿದ್ದಾರೆ ಆದರೆ ಯಾವ ಫಂಡ್​ನಲ್ಲಿ ಕೆಲಸ ಮಾಡಿದ್ದಾರೆ ಗೊತ್ತಿಲ್ಲ ಇನ್ನು ಮತ್ತೊಂದೆಡೆ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂತೋಷ್ ಪಾಟೀಲ್ ಕೆಲಸ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯ ರಾಹುಲ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಕೆಲಸ ಮಾಡಿದ್ದಾರೆ. ಆದರೆ ಯಾವ ಫಂಡ್​ನಲ್ಲಿ ಕೆಲಸ ಮಾಡಿದ್ದಾರೆ ಗೊತ್ತಿಲ್ಲ. ಕೆಲಸ ನಡೆಯಬೇಕಾದರೆ ಯಾವ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದೆ ಅಂತ ಪಿಡಿಓ‌ ಹಾಗೂ ಇಡಿ ಅವರಿಗೆ ಕೇಳಿದ್ದೇವೆ. ಗ್ರಾಮ ಪಂಚಾಯಿತಿ ಸಭೆಯಲ್ಲಿ ಉದ್ಯೋಗ ಖಾತ್ರಿ ಆಗಲಿ ಯಾವುದೇ ವಿಷಯ ಚರ್ಚೆಗೆ ಬಂದಿಲ್ಲ. ಕೆಲಸ ಮಾಡಿದ್ದಾರೆ ಆದರೆ ಯಾವ್ ಫಂಡ್ ನಲ್ಲಿ ಮಾಡಿದ್ದಾರೆ ಏನು ಗೊತ್ತಿಲ್ಲ. ಇವತ್ತು ಗ್ರಾಂ.ಪಂ ಸಭೆಗೂ ಮುಂಚೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಮಗಾರಿಗೆ ಸಂಪೂರ್ಣವಾಗಿ 12 ಕೋಟಿ ಅನುದಾನ ಕೊಟ್ಟು ಕೆಲಸ ಮಾಡಿದ್ದಾರೆ ಅದಷ್ಟೇ ಗೊತ್ತು. ಕಾಮಗಾರಿ ಟೆಂಡರ್ ಕರೆಯದೆ ಸಂತೋಷ್ ಮಾಡಿರುವ ಕೆಲಸದಲ್ಲಿ ನಾವಿಲ್ಲ. ಬೇಕಾದರೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಫಂಡಲ್ಲಿ 12 ಕೋಟಿ ಕೆಲಸ ಮಾಡಿದ್ದಾರೆ ಅದು ಬೇಕಾದರೆ ಹೇಳುತ್ತೇನೆ. ಸಂತೋಷ್ ಕೆಲಸ ಮಾಡಿದ್ದಾರೆ, ಆದರೆ ಯಾವ ಫಂಡ್ ನಲ್ಲಿ ಕೆಲಸ ಮಾಡಿದ್ದಾರೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಇಲ್ಲ ಎಂದು ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯ ರಾಹುಲ್ ತಿಳಿಸಿದ್ದಾರೆ.

ಇದನ್ನೂ ಓದಿ: ನವಜೋತ್​ ಸಿಂಗ್ ಸಿಧು ಬಿಟ್ಟು ಹೋದ ಜಾಗವನ್ನು ಇಮ್ರಾನ್ ಖಾನ್​ ತುಂಬಲಿ; ಪಾಕ್​ ಮಾಜಿ ಪ್ರಧಾನಿಯ ಮಾಜಿ ಪತ್ನಿಯಿಂದ ವ್ಯಂಗ್ಯ

Follow us on

Related Stories

Most Read Stories

Click on your DTH Provider to Add TV9 Kannada