ಬಸನಗೌಡ ಯತ್ನಾಳ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆಂದರೆ ಖಂಡಿತ ಸೇರಿಸಿಕೊಳ್ಳುತ್ತೇವೆ: ರಾಜು ಕಾಗೆ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Mar 28, 2025 | 12:12 PM

ಹನಿ ಟ್ರ್ಯಾಪ್ ವಿಷಯದಲ್ಲಿ ಮಾತಾಡಿದ ರಾಜು ಕಾಗೆ, ಅದು ವೈಯಕ್ತಿಕವಾದ ವಿಷಯ ತಾನೇನೂ ಮಾತಾಡಲು ಬಾರದು ಎಂದರು. ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಉತ್ತರ ಕೊಡಲೇಬೇಕಿತ್ತು, ಪ್ರಸ್ತಾಪವನ್ನು ಅಸಡ್ಡೆ ಮಾಡಿದ್ದರೆ ಆರೋಪವನ್ನು ಒಪ್ಪಿಕೊಂಡ ಸನ್ನಿವೇಶ ನಿರ್ಮಾಣವಾಗುತಿತ್ತು ಎಂದು ರಾಜು ಕಾಗೆ ಹೇಳಿದರು.

ಹುಬ್ಬಳ್ಳಿ, ಮಾರ್ಚ್ 28: ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಾಂಗ್ರೆಸ್ ಪಕ್ಷ ಸೇರಬಯಸಿದರೆ ಅವರಿಗೆ ಸ್ವಾಗತವಿದೆ, ಯಾವುದೇ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು. ಅವರೇ ಖುದ್ದಾಗಿ ಬರುತ್ತೇನೆ ಅಂತ ಹೇಳಿದರೆ ಬೇರೆಯವರು ಯಾಕೆ ಅಡ್ಡಿಪಡಿಸುತ್ತಾರೆ ಎಂದು ಪ್ರಶ್ನಿಸಿದ ಶಾಸಕ ಪಕ್ಷದ ಹೈಕಮಾಂಡ್ ಜೊತೆ ತಾನು ಮಾತಾಡುವುದಾಗಿ ಹೇಳಿದರು. ಸಾರಿಗೆ ನೌಕರರ ಪರಿಷ್ಕರಣೆಯ ಬಗ್ಗೆ ಹೇಳಿದ ಅವರು ಸಂಕ್ರಾಂತಿ ಹಬ್ಬದ ನಂತರ ಸಭೆ ನಡೆಯಬೇಕಿತ್ತು, ಕಾರಣಾಂತರಗಳಿಂದ ನಡೆದಿಲ್ಲ, ಏಪ್ರಿಲ್ 5 ರಂದು ಸಭೆಯೊಂದನ್ನು ನಡೆಸಿ ಪರಿಷ್ಕರಣೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕಾಗೆ ಹೇಳಿದರು.

ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯತ್ನಾಳ್ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಪಡೆವ ಕನಸು ಕಾಣುತ್ತಿದ್ದರೆ ಅದು ಕೇವಲ ಭ್ರಮೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.