ಚಿಕ್ಕಬಳ್ಳಾಪುರದಿಂದ ಸುಧಾಕರ್ ಸ್ಪರ್ಧಿಸಿದರೆ ನನಗೆ ಟಿಕೆಟ್ ನೀಡುವಂತೆ ವರಿಷ್ಠರನ್ನು ಆಗ್ರಹಿಸುತ್ತೇನೆ: ಪ್ರದೀಪ್ ಈಶ್ವರ್

|

Updated on: Jan 11, 2024 | 3:00 PM

ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ರವಿ, ಬಾಲಾಜಿ ಮೊದಲಾದವರ ಹೆಸರುಗಳು ತೇಲಾಡುತ್ತಿವೆ ಎಂದ ಪ್ರದೀಪ್, ಹೈಕಮಾಂಡ್ ಯಾರಿಗೇ ನೀಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು. ತನಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷನಿಷ್ಠೆ ಮುಖ್ಯ, ವರಿಷ್ಠರ ಅಣತಿಯನ್ನು ಪಾಲಿಸುತ್ತೇವೆ ಎಂದು ಶಾಸಕ ಹೇಳಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಇಲ್ಲಿನ ಮಾಜಿ ಶಾಸಕ ಕೆ ಸುಧಾಕರ್ (K Sudhakar) ನಡುವಿನ ರಾಜಕೀಯ ವೈಷಮ್ಯ (political rivalry) ಸದಾ ಹೊಗೆಯಾಡುತ್ತಿರುತ್ತದೆ. ಮಾಧ್ಯಗಳೊಂದಿಗೆ ಮಾತಾಡುವಾಗ ಅವರಿಬ್ಬರು ಪರಸ್ಪರ ದೋಷಾರೋಪಗಳನ್ನು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ನಗರದಲ್ಲಿಂದು ಮಾತಾಡಿದ ಪ್ರದೀಪ್, ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬೆಳಕು ಚೆಲ್ಲಿದರು. ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ರವಿ, ಬಾಲಾಜಿ ಮೊದಲಾದವರ ಹೆಸರುಗಳು ತೇಲಾಡುತ್ತಿವೆ ಎಂದ ಪ್ರದೀಪ್, ಹೈಕಮಾಂಡ್ ಯಾರಿಗೇ ನೀಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು. ತನಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷನಿಷ್ಠೆ ಮುಖ್ಯ, ವರಿಷ್ಠರ ಅಣತಿಯನ್ನು ಪಾಲಿಸುತ್ತೇವೆ ಎಂದು ಶಾಸಕ ಹೇಳಿದರು. ಬಿಜೆಪಿಯಿಂದ ಆರ್ ಸುಧಾಕರ್ ಅವರನ್ನು ಕಣಕ್ಕಿಳಿಯುವ ಸಾಧ್ಯತೆಯಿದೆ ಅಂತ ಹೇಳಿದಾಗ ಪ್ರದೀಪ್, ಅವರು ಸ್ಪರ್ಧಿಸುವುದಾದರೆ ತನಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡುವುದಾಗಿ ಹೇಳಿ, ಸುಧಾಕರ್ ವಿರುದ್ಧ ನಿಲ್ತೀನಿ ಮತ್ತು ಗೆಲ್ತೀನಿ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on