AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಹಗರಣಗಳಲ್ಲಿ ಶಾಮೀಲಾಗಿದ್ದೇನೆ ಅಂತ ಬಿಜೆಪಿ ನಾಯಕರಿಗೆ ಖಾತರಿಯಾಗಿದ್ದರೆ ತನಿಖೆ ಯಾಕೆ ಮಾಡಿಸಲಿಲ್ಲ? ಪ್ರಿಯಾಂಕ್ ಖರ್ಗೆ

Bengaluru News: ಹಗರಣಗಳಲ್ಲಿ ಶಾಮೀಲಾಗಿದ್ದೇನೆ ಅಂತ ಬಿಜೆಪಿ ನಾಯಕರಿಗೆ ಖಾತರಿಯಾಗಿದ್ದರೆ ತನಿಖೆ ಯಾಕೆ ಮಾಡಿಸಲಿಲ್ಲ? ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 29, 2023 | 6:02 PM

Share

ಹೆಚ್ ಡಿ ಕುಮಾರಸ್ವಾಮಿಯವರು ಪೆನ್ ಡ್ರೈವ್ ನೀಡಿದರೆ ಅದನ್ನೂ ತನಿಖೆ ಮಾಡಿಸ್ತೀವಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ಧೋರಣೆ ಇಬ್ಬಂದಿತನದಿಂದ ಕೂಡಿದೆ ಎಂದು ಹೇಳಿದರು. ತಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣ (BitCoin Scam), ಪಿಎಸ್ ಐ ನೇಮಕಾತಿ ಹಗರಣಗಳ (PSI Recruitment Scam) ಬಗ್ಗೆ ಮಾತಾಡಿದಾಗ ಸಾಕ್ಷಿ ಇದೆಯಾ ಅಂತ ಕೇಳಿದರು. ಸಾಕ್ಷಿ ಕಲೆಹಾಕಿದಾಗ ದ್ವೇಷದ ರಾಜಕಾರಣ ಎಂದರು. ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಾಗ ಖರ್ಗೆಯವರೇ ಅದನ್ನು ಮಾಡಬೇಡಿ, ಯಾಕೆಂದರೆ, ತನಿಖೆಯಲ್ಲಿ ನಿಮ್ಮ ಹೆಸರೇ ಮೊದಲಿಗೆ ಹೊರಬರೋದು ಅಂತ ಹೇಳಿದರು. ಬಿಜೆಪಿ ನಾಯಕರಿಗೆ ನಾಮಿ ಶಾಮೀಲಾಗಿದ್ದೇನೆ ಅಂತ ಅಷ್ಟು ಖಚಿತವಾಗಿ ಗೊತ್ತಿದ್ದರೆ ಯಾಕೆ ತನಿಖೆ ಮಾಡಿಸಲಿಲ್ಲ ಎಂದುಖರ್ಗೆ ಪ್ರಶ್ನಿಸಿದರು. ಹೆಚ್ ಡಿ ಕುಮಾರಸ್ವಾಮಿಯವರು ಪೆನ್ ಡ್ರೈವ್ ನೀಡಿದರೆ ಅದನ್ನೂ ತನಿಖೆ ಮಾಡಿಸ್ತೀವಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.