Kalaburagi News: ಪಕ್ಷದ ಕಾರ್ಯಕರ್ತರಿಂದ ಹಿಗ್ಗಾಮುಗ್ಗಾ ತರಾಟೆಗೊಳಗಾದ ಕಲಬುರಗಿ ಲೋಕ ಸಭಾ ಸದಸ್ಯ ಡಾ ಉಮೇಶ್ ಜಾಧವ್
ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಸಹ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಮತ್ತೊಬ್ಬ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮೌನವಾಗಿ ಕೂತು ಎಲ್ಲವನ್ನೂ ವೀಕ್ಷಿಸುತ್ತಿದ್ದರು.
ಕಲಬುರಗಿ: ಬಿಜೆಪಿ ಕಲಬುರಗಿ ಲೋಕ ಸಭಾ ಸದಸ್ಯ ಉಮೇಶ್ ಜಾಧವ್ (Dr Umesh Jadhav) ಇಂದು ತಮ್ಮದೇ ಪಕ್ಷದ ಸದಸ್ಯರಿಂದ ತೀವ್ರ ತರಾಟೆಗೊಳಗಾದರು. ನಗರದ ಚೇಂಬರ್ ಅಫ್ ಕಾಮರ್ಸ್ (Chamber of Commerce) ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಬುದ್ಧರ ಸಭೆಯಲ್ಲಿ ಜಾಧವ ಮಾತಾಡಲು ಆರಂಭಿಸಿದಾಗ ಸಭಿಕರಿಂದ ಗಲಾಟೆ ಶುರುವಾಯಿತು. ಗಲಾಟೆ ಮಾಡಿದವರ ಪ್ರಮುಖ ತಕರಾರೆಂದರೆ ಸಂಸದರು ಕಾರ್ಯಕರ್ತರ ಕೈಗೆ ಸಿಗದಿರೋದು. ಒಬ್ಬ ಕಾರ್ಯಕರ್ತ ಅಕ್ಷರಶಃ ಅಕ್ರೋಶ ವ್ಯಕ್ತಪಡಿಸಿದರು. ವಿಧಾನಸಭಾ ಚುನಾವಣೆ (Assembly Polls) ನಡೆಯುತ್ತಿದ್ದ ಸಮಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲು ಬಾರದವರು ಈಗ ಯಾಕೆ ಬಂದಿದ್ದು, ನಾವೇ ತಾನೆ ನಿಮಗೆ ವೋಟು ಹಾಕಿ ಗೆಲ್ಲಿಸಿದ್ದು? ಇಷ್ಟು ದಿನ ಎಲ್ಲಿದ್ದಿರಿ ಅಂತ ಒಂದೇ ಸಮನೆ ತರಾಟೆಗೆ ತೆಗೆದುಕೊಂಡರು. ವೇದಿಕೆ ಮೇಲಿದ್ದ ಒಬ್ಬ ಸಜ್ಜನರು ಶಾಂತರಾಗಿ ಅಂತ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಬೋಲೋ ಭಾರತ್ ಮಾತಾ ಕೀ ಜೈ ಅಂದಾಗ ಕೆಲವರು ಮಾತ್ರ ಜೈ ಅಂದರು. ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಸಹ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಮತ್ತೊಬ್ಬ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮೌನವಾಗಿ ಕೂತು ಎಲ್ಲವನ್ನೂ ವೀಕ್ಷಿಸುತ್ತಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ