ಸಿದ್ದರಾಮಯ್ಯ ತಮ್ಮ ಶಿಷ್ಯ ಜಮೀರ್ ಅಹ್ಮದ್​ಗೆ ಹಂದಿ ಮಾಂಸ ತಿನ್ನಿಸಿ ತೋರಿಸಲಿ: ಪ್ರತಾಪ್ ಸಿಂಹ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 22, 2022 | 1:06 PM

ಮಾಜಿ ಮುಖ್ಯಮಂತ್ರಿಗಳು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು:  ಮಾಂಸ ತಿನ್ನಬಾರದು ಅಂತ ದೇವರು ಹೇಳಿದ್ದಾನಾ ಅಂತ ಹೇಳಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಸಂಸದ ಪ್ರತಾಪ್ ಸಿಂಹ (Pratap Simha) ಪ್ರತಿಕ್ರಿಯಿಸಿ ಅವರಿಗೆ ಒಂದು ಸವಾಲು ಹಾಕಿದ್ದಾರೆ. ಮೈಸೂರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಸಿಂಹ ದೇವರ ಮಾಂಸ ತಿನ್ನಬಾರದು ಅಂತ ಹೇಳಿಲ್ಲ ಅಂತ ಹೇಳುವ ಸಿದ್ದರಾಮಯ್ಯನವರು ತಮ್ಮ ಆಪ್ತ ಶಿಷ್ಯ ಜಮೀರ ಅಹ್ಮದ್ ಗೆ ಹಂದಿ ಮಾಂಸ ತಿನ್ನಿಸಲಿ ನೋಡೋಣ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.