ಕೇವಲ 15-ತಿಂಗಳು ವಯಸ್ಸಿನಲ್ಲಿ ಪುಟಾಣಿ ಕಿಯಾರಾ ತನ್ನ ತಲೆಗೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನಮಾಡಿ ವಿಶ್ವದಾಖಲೆ ಮೆರೆದಿದ್ದಾಳೆ
ಕಿಯಾರಾ ಕೇವಲ ಒಂದೂ-ಕಾಲು-ವರ್ಷದವಳಾಗಿದ್ದಾಗ (15-ತಿಂಗಳು) ಕ್ಯಾನ್ಸರ್ ಪೀಡಿತರಿಗೆ ತನ್ನ ತಲೆಗೂದಲು ದಾನ ಮಾಡುವ ಮೂಲಕ ಅದನ್ನು ಮಾಡಿದ ವಿಶ್ವದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ.
ಈ ಪುಟಾಣಿ ಮಗುವಿನ ಹೆಸರು ಕಿಯಾರಾ (Kiara), ಈಗ 22 ತಿಂಗಳು ವಯಸ್ಸಿನ ಈ ಮುದ್ದು ಮಗು ಸುಮಾರು 7 ತಿಂಗಳು ಹಿಂದೆಯೇ ವಿಶ್ವ ವಿಕ್ರಮವೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ ಅಂದರೆ ನಂಬುತ್ತೀರಾ? ಹೌದು ಮಾರಾಯ್ರೇ, ಅಮೆರಿಕದ ಅಟ್ಲಾಂಟಾದಲ್ಲಿ ನೆಲೆಸಿರುವ ಬೆಂಗಳೂರಿನ ಪ್ರವೀಣ್ (Praveen) ಮತ್ತು ವಿದ್ಯಾ (Vidya) ದಂಪತಿಯ ಮಗಳು ಕಿಯಾರಾ ಕೇವಲ ಒಂದೂ-ಕಾಲು-ವರ್ಷದವಳಾಗಿದ್ದಾಗ (15-ತಿಂಗಳು) ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತವಾಗಿ ವಿಗ್ಗಳನ್ನು ನೀಡುವ ಫ್ರೀ ವಿಗ್ಸ್ 4 ಕಿಡ್ಸ್ ಸಂಸ್ಥೆಗೆ ತನ್ನ ತಲೆಗೂದಲು ದಾನ ಮಾಡುವ ಮೂಲಕ ಅದನ್ನು ಮಾಡಿದ ವಿಶ್ವದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ. ಅವಳ ಸಾಧನೆಯನ್ನು ತಂದೆತಾಯಿಗಳು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Latest Videos