ದೇವೇಗೌಡರು ಪ್ರಧಾನಿಯಾಗಿದ್ದಾಗ 9 ಟಿ ಎಮ್ ಸಿ ನೀರು ಬಿಡಿಸಿರದಿದ್ದರೆ, ಕಾಂಗ್ರೆಸ್ ಆಣೆಕಟ್ಟುಗಳನ್ನು ಎಲ್ಲಿ ಕಟ್ಟುತ್ತಿತ್ತು? ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2022 | 7:38 PM

ಕಾಂಗ್ರೆಸ್ ಪಕ್ಷ ಎಲ್ಲ ಆಣೆಕಟ್ಟುಗಳ ನಿರ್ಮಾಣದ ಶ್ರೇಯಸ್ಸು ತೆಗೆದುಕೊಳ್ಳುತ್ತಿರುವುದನ್ನು ಗೇಲಿ ಮಾಡಿದ ಕುಮಾರ ಸ್ವಾಮಿಯವರು, ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರ ನಡೆಸಲು ಹಣವಿಲ್ಲದ ಕಾರಣ ಕೊಲ್ಕತ್ತಾಗೆ ಹೋಗಿ ಪೀಯರ್ಲೆಸ್ ಸಂಸ್ಥೆಯಿಂದ ರೂ. 180 ಕೋಟಿ ಸಾಲ ತಂದಿದ್ದರು, ಈ ವಿಷಯಗಳೆಲ್ಲ ಚರ್ಚಿಸಬೇಕಿದೆ ಎಂದು ಹೇಳಿದರು.

ಜೆಡಿ(ಎಸ್) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಕಾಂಗ್ರೆಸ್ ನಾಯಕರ (Congress leaders) ನಡುವೆ ಕಾದಾಟ ಮುಂದುವರಿದೆ. ಬೆಂಗಳೂರಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರ ಸ್ವಾಮಿ ಅವರು ರಾಮಲಿಂಗ ರೆಡ್ಡಿ (Ramalinga Reddy) ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾಡಿದ ಭಾಷಣವನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದರು. ರೆಡ್ಡಿಯವರು ಮಾತನಾಡುವಾಗ ಕಾಂಗ್ರೆಸ್ ಸರಕಾರ ಆಡಳಿತದಲ್ಲಿರುವಾಗಲೇ ರಾಜ್ಯದಲ್ಲಿ 26 ಆಣೆಕಟ್ಟುಗಳನ್ನು ಕಟ್ಟಲಾಗಿದೆ ಎಂದು ಹೇಳಿದರಂತೆ. ಕಾವೇರಿ ನದಿಗೆ ವಿವಿಧ ಹಂತಗಳಲ್ಲಿ ಕಟ್ಟಲಾಗಿರುವ ಆಣೆಕಟ್ಟುಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ; ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರನೇ ಹಂತ, ಎಸ್ ಎಮ್ ಕೃಷ್ಣ ಅವರ ಅವಧಿಯಲ್ಲಿ 4ನೇ ಹಂತ, ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ 5 ನೇ ಹಂತ, 6ನೇ ಹಂತ ಸಿದ್ದರಾರಮಯ್ಯನವರ ಅವಧಿಯಲ್ಲಿ ಎಂದು ರೆಡ್ಡಿ ಹೇಳಿದ್ದಾರೆ ಅಂತ ಕುಮಾರ ಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಪಕ್ಷ ಎಲ್ಲ ಆಣೆಕಟ್ಟುಗಳ ನಿರ್ಮಾಣದ ಶ್ರೇಯಸ್ಸು ತೆಗೆದುಕೊಳ್ಳುತ್ತಿರುವುದನ್ನು ಗೇಲಿ ಮಾಡಿದ ಕುಮಾರ ಸ್ವಾಮಿಯವರು, ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರ ನಡೆಸಲು ಹಣವಿಲ್ಲದ ಕಾರಣ ಕೊಲ್ಕತ್ತಾಗೆ ಹೋಗಿ ಪೀಯರ್ಲೆಸ್ ಸಂಸ್ಥೆಯಿಂದ ರೂ. 180 ಕೋಟಿ ಸಾಲ ತಂದಿದ್ದರು, ಈ ವಿಷಯಗಳೆಲ್ಲ ಚರ್ಚಿಸಬೇಕಿದೆ ಎಂದು ಹೇಳಿದರು. ದೇವೇಗೌಡ ಅವರು ಪ್ರಧಾನಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ 9 ಟಿ ಎಮ್ ಸಿ ನೀರು ಬಿಡುಗಡೆ ಮಾಡಿಸಿರದಿದ್ದರೆ ಇವರು ಆಣೆಕಟ್ಟುಗಳನ್ನು ಎಲ್ಲಿ ಕಟ್ಟುತ್ತಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನವನ್ನು ತಾನು ವಿರೋಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು. ಆಸಲಿಗೆ ತಾವು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿ ಮನವೊಲಿಸಿದ್ದು ತಾನು ಎಂದು ಹೇಳಿದ ಕುಮಾರ ಸ್ವಾಮಿ ಅವರು ಅದೇ ಡಿಪಿಆರ್ ಈಗಲೂ ಜೀವಂತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  HD Kumaraswamy: ನೀವು ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು; ಡಿಕೆ ಶಿವಕುಮಾರ್​ಗೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ 

ಇದನ್ನೂ ಓದಿ:  HD Kumaraswamy: ಮೂರು ವರ್ಷದಿಂದ ದೇಣಿಗೆ ನೆಪದಲ್ಲಿ ದೋಚಿದ್ದು ಸಾಲೋದಿಲ್ವ – ಬಿಜೆಪಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

Published on: Mar 04, 2022 07:38 PM