ಉಕ್ರೇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ನೆರವು ಸಿಗಲಿಲ್ಲ ಎಂದು ಸ್ವದೇಶಕ್ಕೆ ವಾಪಸ್ಸಾದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ!
ಸ್ಥಳಾಂತರದ (evacuation) ಪದದ ವ್ಯಾಖ್ಯಾನವೇ ಬದಲಾದಂತಿದೆ. ಇವಾಕ್ಯುಯೇಷನ್ ಅಂದರೆ ನಿಮ್ಮನ್ನು ಗಲಭೆಗ್ರಸ್ಥ, ಯುದ್ಧಗ್ರಸ್ಥ ಸ್ಥಳದಿಂದ ಸುರಕ್ಷಿತವಾಗಿ ಪಾರು ಮಾಡಿ ಸ್ವದೇಶಕ್ಕೆ ಕರೆತರುವುದು ಅಗಿರುತ್ತದೆ. ಆದರೆ ಇಲ್ಲಿ ಉಕ್ರೇನಿಂದ ಭಾರತೀಯರು ಪೋಲೆಂಡ್, ರುಮೇನಿಯಾ, ಹಂಗರಿ ಮತ್ತು ಸ್ಲೋವಾಕ್ ಗಡಿಗಳಿಗೆ ತಾವೇ ಹೋಗುತ್ತಿದ್ದಾರೆ
ಉಕ್ರೇನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಶುಕ್ರವಾರ ಪೋಲೆಂಡ್ (Poland) ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅವರಲ್ಲಿ ಕೆಲವರು ಕನ್ನಡಿಗರಾಗಿದ್ದು ಟಿವಿ9 ದೆಹಲಿ ವರದಿಗಾರ ಹರೀಷ್ ಅವರೊಂದಿಗೆ ಮಾತಾಡಿದರು. ಖಾರ್ಕಿವ್ ನಲ್ಲಿ (Kharkiv) ಓದುತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಪೋಲೆಂಡ್ ಬಾರ್ಡರ್ (border) ತಲುಪುವುದು ಬಹಳ ಪ್ರಯಾಸಕರವಾಗಿತ್ತು. ಟ್ರೇನುಗಳಲ್ಲಿ ಕಾಲಿಡಲಾಗದಷ್ಟು ಜನಸಂದಣಿ. ವಿದ್ಯಾರ್ಥಿಗಳು ಟಾಯ್ಲೆಟ್ ಗಳ ಪಕ್ಕ ನಿಂತು ಪ್ರಯಾಣಿಸ ಬೇಕಾಯಿತು. ಟ್ರೇನುಗಳಲ್ಲಿ ಉಕ್ರೇನಿನ ಜನರಿಗೆ ಆದ್ಯತೆ ನೀಡಲಾಗುತ್ತಿದೆ ಅಂತ ಈ ವಿದ್ಯಾರ್ಥಿನಿಯೂ ಹೇಳಿದರು. ಸುರಕ್ಷಿತ ಸ್ಥಳವೆನ್ನಲಾಗಿದ್ದ ಲಾವಿವ್ ನಲ್ಲಿ (Lviv) ಇವರು ಅಲ್ಲಿಗೆ ಮುಟ್ಟಿದಾಕ್ಷಣ ಶೆಲ್ಲಿಂಗ್ ಶುರುವಾಗಿದ್ದರಿಂದ ಅವರು ಮತ್ತೇ ಬಸ್ ಒಂದನ್ನು ಬುಕ್ ಮಾಡಿಕೊಂಡು ಪೋಲೆಂಡ್ ಬಾರ್ಡರ್ ಗೆ ಬಂದರಂತೆ.
ವಿದ್ಯಾರ್ಥಿಗಳು ಬಾರ್ಡರ್ ತಲುಪುವವರೆಗೆ ಮತ್ತು ತಲುಪಿದ ನಂತರವೂ ಉಕ್ರೇನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮಾರ್ಗದರ್ಶನ ನೀಡಿದರು ಅಂತ ವಿದ್ಯಾರ್ಥಿನಿ ಹೇಳುತ್ತಾರೆ. ಟ್ರೇನ್ ಗಳಲ್ಲಿ ಹತ್ತಲು ವಿಫಲರಾದವರು ಸುಮಾರು 30 ಕಿಮೀವರೆಗೆ ನಡೆದು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ.
ರಾಯಭಾರಿ ಕಚೇರಿಯಿಂದ ನೆರವು ಸಿಗುತ್ತಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪ ನಿಜ ಎಂದು ವಿದ್ಯಾರ್ಥಿನಿ ಹೇಳುತ್ತಾರೆ. ಇವರಿಗೆ ನೆರವು ಸಿಗಲಾರಂಭಿಸಿದ್ದು ಪೋಲೆಂಡ್ ಬಾರ್ಡರ್ ತಲುಪಿದ ನಂತರವೇ. ಗಡಿ ತಲುಪುವವರೆಗೆ ಕಚೇರಿಯಿಂದ ಯಾವ ಸಹಾಯವೂ ಸಿಕ್ಕಿಲ್ಲ. ಸ್ಥಳಾಂತರದ (evacuation) ಪದದ ವ್ಯಾಖ್ಯಾನವೇ ಬದಲಾದಂತಿದೆ. ಇವಾಕ್ಯುಯೇಷನ್ ಅಂದರೆ ನಿಮ್ಮನ್ನು ಗಲಭೆಗ್ರಸ್ಥ, ಯುದ್ಧಗ್ರಸ್ಥ ಸ್ಥಳದಿಂದ ಸುರಕ್ಷಿತವಾಗಿ ಪಾರು ಮಾಡಿ ಸ್ವದೇಶಕ್ಕೆ ಕರೆತರುವುದು ಅಗಿರುತ್ತದೆ. ಆದರೆ ಇಲ್ಲಿ ಉಕ್ರೇನಿಂದ ಭಾರತೀಯರು ಪೋಲೆಂಡ್, ರುಮೇನಿಯಾ, ಹಂಗರಿ ಮತ್ತು ಸ್ಲೋವಾಕ್ ಗಡಿಗಳಿಗೆ ತಾವೇ ಹೋಗುತ್ತಿದ್ದಾರೆ, ಯಾರ ಸಹಾಯವೂ ಇಲ್ಲದೆ ಎಂದು ವಿದ್ಯಾರ್ಥಿನಿ ಹೇಳುತ್ತಾರೆ.
ಬಾರ್ಡರ್ ತಲುಪುವವರೆಗೆ ಅವರು ಅನುಭವಿಸಿರಬಹುದಾದ ಭಯ, ಆತಂಕವನ್ನು ಒಮ್ಮೆ ಯೋಚಿಸಿ ನೋಡಿ. ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಅವರು ಬಂದಿದ್ದಾರೆ ಮತ್ತು ಬರುತ್ತಿದ್ದಾರೆ. ಆಗ ಅವರಿಗೆ ರಾಯಭಾರಿ ಕಚೇರಿಯಿಂದ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಬರಿ ಹೊಟ್ಟೆಯಲ್ಲಿ, ಕುಡಿಯಲು ನೀರು ಸಹ ದೊರಕದೆ ಅವರು 30 ಕಿಮೀಗಳಷ್ಟು ದೂರವನ್ನು ತಮ್ಮ ಲಗ್ಗೇಜ್ನೊಂದಿಗೆ ನಡೆದಿದ್ದಾರೆ. ಅವರಿಗೆ ನೆರವಿನ ಅವಶ್ಯಕತೆ ಆಗ ಇತ್ತು.
ಪೋಲೆಂಡ್ ಒಂದು ಸುರಕ್ಷಿತ ಪ್ರದೇಶ. ಅಲ್ಲಿಗೆ ತಲುಪಿದ ಮೇಲೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ರಾಯಭಾರಿ ಕಚೇರಿ ಮಾಡಿದೆಯಂತೆ. ಗುರವಾರ ಭಾರತಕ್ಕೆ ಆಗಮಿಸಿದ ಒಬ್ಬ ವಿದ್ಯಾರ್ಥಿನಿ ರಾಯಭಾರ ಕಚೇರಿಯನ್ನು ಮನಸಾರೆ ಶಪಿಸಿದರು. ನಮ್ಮನ್ನು ಯಾರೂ ಸ್ಥಳಾಂತರ ಮಾಡಿಲ್ಲ, ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಪೋಲೆಂಡ್, ಹಂಗರಿ, ರುಮೇನಿಯಾ ತಲುಪಿದ ಮೇಲೆ ನಮಗೆ ನೆರವಿನ ಅವಶ್ಯಕತೆಯೇ ಇರಲಿಲ್ಲ ಎಂದು ಅವರು ಹೇಳಿದರು.

ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!

ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ

2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?

ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
