Stock Market: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ತತ್ತರಿಸಿದ ಷೇರುಪೇಟೆ; ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ

ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಮಾರ್ಚ್ 4ನೇ ತಾರೀಕಿನ ಶುಕ್ರವಾರದ ಆರಂಭ ಸೆಷನ್​ನಲ್ಲಿ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 313 ಪಾಯಿಂಟ್ಸ್ ಕುಸಿತ ಕಂಡಿದೆ.

Stock Market: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ತತ್ತರಿಸಿದ ಷೇರುಪೇಟೆ; ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Mar 04, 2022 | 10:56 AM

ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆಯು (Stock Market) ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಬೆಳಗ್ಗೆ ವಹಿವಾಟು ಭಾರೀ ಮಟ್ಟದಲ್ಲಿ ತತ್ತರಿಸಿತು. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 790.27 ಪಾಯಿಂಟ್ಸ್​ ಅಥವಾ ಶೇ 1.43ರಷ್ಟು ಕುಸಿದು 54,312.41 ಪಾಯಿಂಟ್ಸ್​ ಮುಟ್ಟಿದರೆ, ನಿಫ್ಟಿ 229.80 ಪಾಯಿಂಟ್ಸ್ ಅಥವಾ ಶೇ 1.39ರಷ್ಟು ನೆಲ ಕಚ್ಚಿ, 16,268.20 ಪಾಯಿಂಟ್ಸ್​ ಮಟ್ಟವನ್ನು ಮುಟ್ಟಿತು. 1048 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1726 ಕಂಪೆನಿಗಳ ಷೇರು ಇಳಿಕೆ ಕಂಡವು. ಇನ್ನು 108 ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ವಲಯವಾರು ಗಮನಿಸುವುದಾದರೆ ಬಿಎಸ್​ಇ ಲೋಹದ ಸೂಚ್ಯಂಕ ಒಂದನ್ನು ಹೊರತುಪಡಿಸಿ, ಉಳಿದ ಎಲ್ಲವೂ ಇಳಿಕೆಯನ್ನು ದಾಖಲಿಸಿತ್ತು. ವಾಹನ ಸೂಚ್ಯಂಕ ಅತಿ ದೊಡ್ಡ ನಷ್ಟ ಕಂಡು, ಶೇ 2.82ರಷ್ಟು ಕುಸಿತ ಕಂಡಿತು.

ಆ ನಂತರ ಬಿಎಸ್​ಇ ರಿಯಾಲ್ಟಿ ಶೇ 2.01, ಬಿಎಸ್​ಇ ಐಟಿ ಶೇ 1.36ರಷ್ಟು ಇಳಿಕೆ ಕಂಡಿತು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಕ್ರಮವಾಗಿ ಶೇ 1.36 ಮತ್ತು 0.87ರಷ್ಟು ಕುಸಿತವನ್ನು ಕಂಡಿತ್ತು. ತೈಲ ಮತ್ತು ಅನಿಲ ಸೂಚ್ಯಂಕ ಶೇ 0.64ರಷ್ಟು ಇಳಿಕೆ ಕಂಡವು. ಇನ್ನು ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ 15 ಪೈಸೆ ಇಳಿಕೆಯೊಂದಿಗೆ 76.06ರಲ್ಲಿ ಆರಂಭಗೊಂಡಿತು. ಈ ಹಿಂದಿನ ದಿನ 75.91ರಲ್ಲಿ ಕೊನೆಗೊಂಡಿತ್ತು.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಮತ್ತು ನಿಫ್ಟಿ 313 ಪಾಯಿಂಟ್ಸ್ ಕುಸಿತವಾಗಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಯುಪಿಎಲ್ ಶೇ 2.04 ಐಟಿಸಿ ಶೇ 0.62 ಟಾಟಾ ಸ್ಟೀಲ್ ಶೇ 0.12

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಏಷ್ಯನ್ ಪೇಂಟ್ಸ್ ಶೇ -7.22 ಮಾರುತಿ ಸುಜುಕಿ ಶೇ -5.09 ಹೀರೋ ಮೋಟೋಕಾರ್ಪ್ ಶೇ -4.52 ಹಿಂದೂಸ್ತಾನ್ ಯುನಿಲಿವರ್ ಶೇ -4.35 ಐಷರ್ ಮೋಟಾರ್ಸ್ ಶೇ -4.33

ಇದನ್ನೂ ಓದಿ: Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು

Published On - 10:54 am, Fri, 4 March 22

ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್