ಜನಾರ್ದನ್​ ರೆಡ್ಡಿ ಮಗ ಕಿರೀಟಿ ಬಗ್ಗೆ ಎಸ್​.ಎಸ್​. ರಾಜಮೌಳಿ ಹೇಳಿದ್ದೇನು?

ಮಾಜಿ ಸಚಿವ ಜನಾರ್ದನ ​ರೆಡ್ಡಿ ಮಗ ಕಿರೀಟಿ ರೆಡ್ಡಿ ಕಾಲಿಟ್ಟಿದ್ದಾರೆ. ಇಂದು (ಮಾರ್ಚ್​ 4) ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ.

TV9kannada Web Team

| Edited By: Rajesh Duggumane

Mar 04, 2022 | 2:59 PM

ಮಾಜಿ ಸಚಿವ ಜನಾರ್ದನ ​ರೆಡ್ಡಿ ಮಗ ಕಿರೀಟಿ ರೆಡ್ಡಿ (Kireeti Reddy ) ಕಾಲಿಟ್ಟಿದ್ದಾರೆ. ಇಂದು (ಮಾರ್ಚ್​ 4) ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ಆಗಮಿಸಿ ಕ್ಲ್ಯಾಪ್​ ಮಾಡಿದ್ದಾರೆ. ಕಿರೀಟಿ ಅವರ ಇಂಟ್ರೋಡಕ್ಷನ್​ ಟೀಸರ್​ ರಿಲೀಸ್​ ಮಾಡಲಾಗಿದೆ. ಈ ಟೀಸರ್​ನಲ್ಲಿ ಸಖತ್​ ಸ್ಟಂಟ್ಸ್​ಗಳನ್ನು ಮಾಡಿದ್ದಾರೆ ಕಿರೀಟಿ. ಈ ವಿಡಿಯೋ ನೋಡಿ ರಾಜಮೌಳಿ ಖುಷಿಪಟ್ಟಿದ್ದಾರೆ. ‘ಕಿರೀಟಿ ಬಳಿ ತುಂಬಾನೇ ಟ್ಯಾಲೆಂಟ್​ ಇದೆ. ಅವರು ಸ್ಟಂಟ್ಸ್​, ಡ್ಯಾನ್ಸ್, ನಟನೆ ಮಾಡುತ್ತಾರೆ. ಅವರು ಒಳ್ಳೆಯ ತಂಡ ಸೇರಿದ್ದಾರೆ ಅನ್ನೋದು ಖುಷಿಯ ವಿಚಾರ’ ಎಂದರು ರಾಜಮೌಳಿ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮ ಆಗಿಲ್ಲ. ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ. ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು,‌ ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರು ಈ ಸಿನಿಮಾದ ಭಾಗವಾಗಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: ರಾಜಮೌಳಿ ಜತೆ ಪ್ರಭಾಸ್​ ಮತ್ತೊಂದು ಸಿನಿಮಾ; ಗುಡ್​ ನ್ಯೂಸ್​ ತಿಳಿಸಿದ ‘ರಾಧೆ ಶ್ಯಾಮ್​’ ಹೀರೋ

ಸ್ಟಂಟ್​ ವಿಡಿಯೋ ಮೂಲಕ ಎಂಟ್ರಿ ಕೊಟ್ಟ ಕಿರೀಟಿ; ಶುಭಕೋರಿದ ಖ್ಯಾತ ನಟ ರಾಜಮೌಳಿ

Follow us on

Click on your DTH Provider to Add TV9 Kannada