‘ನನ್ನ ಹೇರ್ ಕಟಿಂಗ್ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಕನ್ನಡದ ನಟ ಪ್ರಥಮ್ ಅವರು ‘ನೋ ಕೊಕೇನ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಮಾಸ್ ಸಿನಿಮಾ ಎಂದು ಪ್ರಥಮ್ ಹೇಳಿದ್ದಾರೆ. ಈ ಚಿತ್ರದ ಬಜೆಟ್ ದೊಡ್ಡದು ಎಂದು ಅವರು ಹೇಳಿದ್ದಾರೆ. ಈ ಸಿನಿಮಾ ಖಂಡಿತಾ ಹಿಟ್ ಆಗುತ್ತದೆ ಎಂಬ ಭರವಸೆಯಲ್ಲಿ ಅವರಿದ್ದಾರೆ. ಟಿವಿ9 ಜೊತೆ ಪ್ರಥಮ್ ಮಾತನಾಡಿದ್ದಾರೆ.
ನಟ ಪ್ರಥಮ್ ಅವರು ‘ನೋ ಕೊಕೇನ್’ (No Cocaine) ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಮಾಸ್ ಸಿನಿಮಾ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದ ಬಜೆಟ್ ಜಾಸ್ತಿ ಎಂದು ಅವರು ಹೇಳಿದ್ದಾರೆ. ‘ಈ ಸಿನಿಮಾಗೆ ಸಾಕಷ್ಟು ತಯಾರಿ ಮಾಡಲಾಗಿದೆ. ನಿಮಗೊಂದು ವಿಷಯ ಗೊತ್ತಾ? ಈ ಸಿನಿಮಾದಲ್ಲಿ ನನ್ನ ಹೇರ್ ಕಟಿಂಗ್ಗೆ ಒಂದು ಲಕ್ಷ ರೂಪಾಯಿ ಖರ್ಚಾಗಿದೆ. ಪ್ರತಿ ದೃಶ್ಯಕ್ಕೂ ಹೇರ್ ಸ್ಟೈಲ್ ನಿಖರವಾಗಿ ಇರಬೇಕು. ಇದು ವಿಶೇಷವಾದ ಆ್ಯಕ್ಷನ್ ಸಿನಿಮಾ’ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 16, 2025 10:40 PM
Latest Videos
