ತ್ರಿಶೂಲಗಳನ್ನು ಹಂಚುವುದು ಕಾನೂನುಬಾಹಿರ ಅಂತಾದ್ರೆ ಶ್ರೀರಾಮ ಸೇನೆಯನ್ನು ತಡೆಯುತ್ತೇವೆ: ಸಂತೋಷ್ ಲಾಡ್
ಒಂದು ಪಕ್ಷ ಅದು ಕಾನೂನುಬಾಹಿರ ಅಂತಾದರೆ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ತ್ರಿಶೂಲ ಹಂಚದಂತೆ ತಡೆಯಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಪತ್ರಿಕಾ ಗೋಷ್ಟಿಗಳಲ್ಲಿ ಇಲ್ಲವೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಚಿವ ಲಾಡ್ ಇಂಗ್ಲಿಷ್ ಭಾಷೆಯ ಪ್ರಯೋಗ ಹೆಚ್ಚು ಮಾಡುತ್ತಾರೆ. ಅದರ ಹಿಂದಿನ ಉದ್ದೇಶವೇನು ಅಂತ ಅವರೇ ಹೇಳಬೇಕು.
ಹುಬ್ಬಳ್ಳಿ: ನಗರದಲ್ಲಿ ಅಂಜಲಿ ಅಂಬಿಗೇರ್ (Anjali Ambiger) ಹತ್ಯೆ ನಡೆದು 4 ದಿನ ಕಳೆದ ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಆಕೆಯ ಮನೆಗೆ ಭೇಟಿ ನೀಡಿ ಅಂಜಲಿಯ ಅಜ್ಜಿ ಮತ್ತು ತಂಗಿಯಂದಿರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಮೈಯಲ್ಲಿ ಹುಷಾರಿಲ್ಲದ (unwell) ಕಾರಣ ಕೊಲೆಯಾದ ದಿನ ಅಂಜಲಿ ಮನೆಗೆ ಬರಲು ಸಾಧ್ಯವಾಗಲಿಲ್ಲ, ಹಾಗಾಗಿ ಇವತ್ತು ಬಂದಿರುವುದಾಗಿ ಹೇಳಿದರು. ಮಹಿಳೆಯರ ಆತ್ಮರಕ್ಷಣೆಗಾಗಿ ಶ್ರೀರಾಮಸೇನೆಯ ಕಾರ್ಯಕರ್ತರು ಪ್ರತಿಯೊಂದು ಮನೆಮನೆ ತೆರಳಿ ತ್ರಿಶೂಲ ವಿತರಿಸುತ್ತೇವೆ ಅಂತ ಹೇಳಿರುವ ಅಂಶವನ್ನು ಗಮನಕ್ಕೆ ತಂದಾಗ ಮೊದಲಿಗೆ ಅವರು ಹಂಚಲಿ, ಯಾರು ಬೇಡ ಅಂತಾರೆ, ಒಳ್ಳೆಯ ಕೆಲಸವೇ ಅನ್ನುತ್ತಾರೆ. ಆದರೆ ನಂತರ, ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ಅಂತ ಗೊತ್ತಿಲ್ಲ. ಕಾನೂನಲ್ಲಿ ಅದಕ್ಕೆ ಅವಕಾಶವಿದ್ದರೆ ಸರಿ, ಒಂದು ಪಕ್ಷ ಅದು ಕಾನೂನುಬಾಹಿರ ಅಂತಾದರೆ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ತ್ರಿಶೂಲ ಹಂಚದಂತೆ ತಡೆಯಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಪತ್ರಿಕಾ ಗೋಷ್ಟಿಗಳಲ್ಲಿ ಇಲ್ಲವೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಚಿವ ಲಾಡ್ ಇಂಗ್ಲಿಷ್ ಭಾಷೆಯ ಪ್ರಯೋಗ ಹೆಚ್ಚು ಮಾಡುತ್ತಾರೆ. ಅದರ ಹಿಂದಿನ ಉದ್ದೇಶವೇನು ಅಂತ ಅವರೇ ಹೇಳಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಮ್ಮ ದೇಶದ ಮೇಲೆ ಸಾಲ ಎಷ್ಟಿದೆ ಅಂತ ಪ್ರಲ್ಹಾದ್ ಜೋಶಿಯವರಿಗೆ ಗೊತ್ತಾ? ಸಂತೋಷ್ ಲಾಡ್, ಕಾರ್ಮಿಕ ಸಚಿವ