ಹೆಚ್ ಡಿ ರೇವಣ್ಣ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದ ದೇವರಾಜೇಗೌಡ ಈಗ್ಯಾಕೆ ಹತ್ತಿರವಾಗಿದ್ದಾರೆ? ಚಲುವರಾಯಸ್ವಾಮಿ

ಹೆಚ್ ಡಿ ರೇವಣ್ಣ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದ ದೇವರಾಜೇಗೌಡ ಈಗ್ಯಾಕೆ ಹತ್ತಿರವಾಗಿದ್ದಾರೆ? ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2024 | 2:55 PM

ಪ್ರಕರಣದಲ್ಲಿ ಮೂವರ ಪಾತ್ರ ಚರ್ಚೆಯಾಗುತ್ತಿದೆ. ವಿಡಿಯೋಗಳನ್ನು ಮಾಡಿದ ಪ್ರಜ್ವಲ್ ರೇವಣ್ಣ, ಅವುಗಳನ್ನು ಡೌನ್ ಲೋಡ್ ಮಾಡಿದ ಡ್ರೈವರ್ ಕಾರ್ತೀಕ್ ಮತ್ತು ಪೆನ್ ಡ್ರೈವ್ ಗಳನ್ನು ಹಂಚಿರುವ ಆರೋಪ ಎದುರಿಸುತ್ತಿರುವ ದೇವರಾಜೇಗೌಡ ಎಂದು ಚಲುವರಾಯಸ್ವಾಮಿ ಹೇಳಿದರು. ಒಂದು ವರ್ಷದಿಂದ ರೇವಣ್ಣ ಕುಟುಂಬದೊಂದಿಗೆ ದ್ವೇಷ ಸಾಧಿಸುತ್ತಿದ್ದ ದೇವರಾಜೇಗೌಡ ಈಗ್ಯಾಕೆ ಆತ್ಮೀಯನಾಗಿದ್ದಾನೆ ಎಂದು ಸಚಿವ ಪ್ರಶ್ನಿಸಿದರು.

ಬೆಂಗಳೂರು: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy), ಮಹಿಳೆ ಅಪಹರಣ ಆಗಿರಲಿಲ್ಲವಾದರೆ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಹೆಸರು ಉಲ್ಲೇಖವಾಗುತ್ತಲೇ ಇರಲಿಲ್ಲ. ಮಹಿಳೆಯನ್ನು ಅಪಹರಿಸಿದ (woman abduction) ವಿಡಿಯೋ ಈಗಿನದಲ್ಲ ಅದು ಹಳೇದು, ಆದರೆ ಮಹಿಳೆಯ ಅಪಹರಣ ನಡೆದಿದ್ದು ಸತ್ಯ ಅಂತ ಮಾಧ್ಯಮ ಸೇರಿದಂತೆ ಎಲ್ಲರಿಗೂ ಗೊತ್ತಿದೆ, ಯಾವುದಕ್ಕೂ ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ, ಸೋಮವಾರ ತೀರ್ಪು ಹೊರಬೀಳಲಿದೆ, ನ್ಯಾಯಾಲಯ ರೇವಣ್ಣರನ್ನು ನಿರ್ದೋಷಿ ಅಂತ ಹೇಳಿದರೆ ಅವರು ಆರೋಪ ಮುಕ್ತರಾಗುತ್ತಾರೆ, ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು ಎಂದು ಚಲುವರಾಯಸ್ವಾಮಿ ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವರಾಜೇಗೌಡ ಮಾಡುವ ಆರೋಪಗಳ ತನಿಖೆಯೂ ನಡೆಯಲಿ ಯಾರು ಬೇಡಂತಾರೆ, ಆದರೆ ಇಡೀ ಪ್ರಕರಣದಲ್ಲಿ ಮೂವರ ಪಾತ್ರ ಚರ್ಚೆಯಾಗುತ್ತಿದೆ. ವಿಡಿಯೋಗಳನ್ನು ಮಾಡಿದ ಪ್ರಜ್ವಲ್ ರೇವಣ್ಣ, ಅವುಗಳನ್ನು ಡೌನ್ ಲೋಡ್ ಮಾಡಿದ ಡ್ರೈವರ್ ಕಾರ್ತೀಕ್ ಮತ್ತು ಪೆನ್ ಡ್ರೈವ್ ಗಳನ್ನು ಹಂಚಿರುವ ಆರೋಪ ಎದುರಿಸುತ್ತಿರುವ ದೇವರಾಜೇಗೌಡ ಎಂದು ಚಲುವರಾಯಸ್ವಾಮಿ ಹೇಳಿದರು. ಒಂದು ವರ್ಷದಿಂದ ರೇವಣ್ಣ ಕುಟುಂಬದೊಂದಿಗೆ ದ್ವೇಷ ಸಾಧಿಸುತ್ತಿದ್ದ ದೇವರಾಜೇಗೌಡ ಈಗ್ಯಾಕೆ ಆತ್ಮೀಯನಾಗಿದ್ದಾನೆ ಎಂದು ಸಚಿವ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೇವಣ್ಣ ಪ್ರಕರಣದ ತನಿಖೆ ಮುಕ್ತ ಮತ್ತು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ: ಎನ್ ಚಲುವರಾಯಸ್ವಾಮಿ