RCB vs CSK: ಸಾವಿರ ರೂಪಾಯಿ ಟಿಕೆಟ್ 15000 ಕೊಟ್ಟರೂ ಸಿಗುತ್ತಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಅಭಿಮಾನಿಗಳ ಅಳಲು
ಧೋನಿ ಮತ್ತು ಕೊಹ್ಲಿ ನಡುವಣ ಕದನ ನೋಡಲು ಉತ್ಸಾಹದಿಂದ ಬಂದಿದ್ದೇವೆ. ಆದರೆ, ಟಿಕೆಟ್ ಸಿಗುತ್ತಾ ಇಲ್ಲ. ಹೆಚ್ಚು ದುಡ್ಡು ಕೊಟ್ಟಾದರೂ ಟಿಕೆಟ್ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಟಿಕೆಟ್ಟೇ ಸಿಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಅಲವತ್ತುಕೊಂಡಿದ್ದಾರೆ.
ಬೆಂಗಳೂರು, ಮೇ 18: ಐಪಿಎಲ್ (IPL 2024) ಟೂರ್ನಿಯ ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಕ್ಷಣಗಣನೆ ಆರಂಭವಾಗಿದೆ. ಆರ್ಸಿಬಿ ಮತ್ತು ಸಿಎಸ್ಕೆ (RCB vs CSK) ಮಧ್ಯೆ ನಡೆಯುವ ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ಸ್ಟೇಡಿಯಂನತ್ತ ಬರಲಾರಂಭಿಸಿದ್ದಾರೆ. ಸ್ಟೇಡಿಯಂ ಹೊರಭಾಗದಲ್ಲಿ ಮಧ್ಯಾಹ್ನದಿಂದಲೇ ಜನಸಂದಣಿ ಶುರುವಾಗಿದೆ. ಈ ಮಧ್ಯೆ, ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. 1000 ರೂಪಾಯಿಯ ಟಿಕೆಟ್ 15000 ರೂ. ಕೊಟ್ಟರೂ ಸಿಗುತ್ತಿಲ್ಲ ಎಂದು ಅಭಿಮಾನಿಗಳು ‘ಟಿವಿ9’ ಬಳಿ ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದು ಕಡೆ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅಭಿಮಾನಿಗಳು ಮ್ಯಾಚ್ ನೋಡಲು ಕಾತುರರಾಗಿದ್ದು, ನೆಚ್ಚಿನ ಆಟಗಾರರ ಪರ ಘೋಷಣೆಗಳನ್ನು ಕೂಗುತ್ತಾ ಮೈದಾನದತ್ತ ದಾಂಗುಡಿ ಇಟ್ಟಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಎಲ್ಲಿ ನೋಡಿದರೂ ಆರ್ಸಿಬಿ ಹಾಗೂ ಸಿಎಸ್ಕೆ ಜೆರ್ಸಿಗಳೇ ಕಾಣಿಸುತ್ತಿವೆ.
ಐಪಿಎಲ್ ಪ್ಲೇ ಆಫ್ ಹಂತ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಹೀಗಾಗಿ ಇತ್ತಂಡಗಳ ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಇದನ್ನೂ ಓದಿ: IPL 2024: ಚಿನ್ನಸ್ವಾಮಿಯಲ್ಲಿ ಆರ್ಸಿಬಿ- ಸಿಎಸ್ಕೆ ಪ್ರದರ್ಶನ ಹೇಗಿದೆ? ಇಲ್ಲಿದೆ ಪೂರ್ಣ ಅಂಕಿಅಂಶ
ಧೋನಿ ಮತ್ತು ಕೊಹ್ಲಿ ನಡುವಣ ಕದನ ನೋಡಲು ಉತ್ಸಾಹದಿಂದ ಬಂದಿದ್ದೇವೆ. ಆದರೆ, ಟಿಕೆಟ್ ಸಿಗುತ್ತಾ ಇಲ್ಲ. ಹೆಚ್ಚು ದುಡ್ಡು ಕೊಟ್ಟಾದರೂ ಟಿಕೆಟ್ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಟಿಕೆಟ್ಟೇ ಸಿಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಅಲವತ್ತುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ