ಡಾ ಸುಧಾಕರ್ ನನಗೆ ಫೋನ್ ಮಾಡಿದ್ದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ: ಎಸ್ ಆರ್ ವಿಶ್ವನಾಥ್, ಬಿಜೆಪಿ ಶಾಸಕ

ಡಾ ಸುಧಾಕರ್ ನನಗೆ ಫೋನ್ ಮಾಡಿದ್ದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ: ಎಸ್ ಆರ್ ವಿಶ್ವನಾಥ್, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 01, 2024 | 12:28 PM

ಸುಧಾಕರ್ ಅವರು ಈ ಬಗೆಯ ಗಿಮಿಕ್ ಮಾಡಿ ಜನರ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದು ಹೇಳಿದ ವಿಶ್ವನಾಥ್, ಸುಧಾಕರ್ ಕಳೆದ 5-6 ದಿನಗಳಲ್ಲಿ ಒಂದು ಮೆಸೇಜ್ ಕಳಿಸಿದ್ದು ಬಿಟ್ರೆ ಅವರ ಮತ್ತು ತನ್ನ ನಡುವೆ ಯಾವುದೇ ಕಮ್ಯುನಿಕೇಶನ್ ನಡೆದಿಲ್ಲ ಎಂದರು

ಬೆಂಗಳೂರು: ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ಮತ್ತು ಪಕ್ಷದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ (Chikkaballapura LS candidate) ಡಾ ಕೆ ಸುಧಾಕರ್ (Dr K Sudhakar) ನಡುವೆ ನಡೆಯುತ್ತಿರೋದು ಮುಸುಕಿನ ಗುದ್ದಾಟವೇನೂ ಅಲ್ಲ, ಅವರ ನಡುವಿನ ಮನಸ್ತಾಪ ಈಗ ಜಗ್ಗಜ್ಜಾಹೀರಾಗಿದೆ. ಮನಸ್ತಾಪ ಯಾಕೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ನಗರದಲ್ಲಿಂದು ವಿಶ್ವನಾಥ್ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡುವಾಗ ಅವರ ಮತ್ತು ಸುಧಾಕರ್ ನಡುವೆ ಹೊಂದಾಣಿಕೆ ಸಮನ್ವಯತೆ ಇಲ್ಲದ್ದು ಮತ್ತೊಮ್ಮೆ ಬೆಳಕಿಗೆ ಬಂತು. ವಿಶ್ವನಾಥ್ ರನ್ನು ತಾನು ಭೇಟಿಯಾಗಲು ಅವರ ಮನೆಗೆ ಹೋಗುತ್ತೇನೆ ಅಂತ ಕರೆ ಮಾಡಿದಾಗ್ಯೂ ಅವರಿಂದ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಸುಧಾಕರ್ ಹೇಳಿದ್ದಾರೆಂದು ವಿಶ್ವನಾಥ್ ಗಮನಕ್ಕೆ ಪತ್ರಕರ್ತರು ತಂದಾಗ ಸಿಡಿಮಿಡಿಗೊಂಡ ಶಾಸಕ, ದಯವಿಟ್ಟು ಅವರ ಕಾಲ್ ಡಿಟೇಲ್ಸ್ ತೆಗೆಸಿ, ಅವರು ಒಂದು ಪಕ್ಷ ತನಗೆ ಕಾಲ್ ಮಾಡಿದ್ದಾರೆ ಅಂತ ಅದರಲ್ಲಿ ಸಾಬೀತಾದರೆ, ಯಲಹಂಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. ಸುಧಾಕರ್ ಅವರು ಈ ಬಗೆಯ ಗಿಮಿಕ್ ಮಾಡಿ ಜನರ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದು ಹೇಳಿದ ವಿಶ್ವನಾಥ್, ಸುಧಾಕರ್ ಕಳೆದ 5-6 ದಿನಗಳಲ್ಲಿ ಒಂದು ಮೆಸೇಜ್ ಕಳಿಸಿದ್ದು ಬಿಟ್ರೆ ಅವರ ಮತ್ತು ತನ್ನ ನಡುವೆ ಯಾವುದೇ ಕಮ್ಯುನಿಕೇಶನ್ ನಡೆದಿಲ್ಲ ಎಂದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಾ ಕೆ ಸುಧಾಕರ್ ವಿರುದ್ಧ ಹೆಚ್ಚಿದ ವಿರೋಧ, ನೆಲಮಂಗಲ ಮತ್ತು ಯಲಹಂಕದಲ್ಲಿ ಗೋ ಬ್ಯಾಕ್ ಸುಧಾಕರ್ ಅಭಿಯಾನ