ಚಿಕ್ಕಬಳ್ಳಾಪುರದಲ್ಲಿ ಅಖಾಡಕ್ಕಿಳಿದ ಎಸ್ಆರ್ ವಿಶ್ವನಾಥ್, ಕಾರು ರ್ಯಾಲಿ ಮೂಲಕ ಕ್ಷೇತ್ರದ ಜನತೆಗೆ ಮಗನ ಪರಿಚಯ
ವಿಧಾನಸಭೆ ಸೋಲಿನ ಬಳಿಕ ಡಾ.ಕೆ. ಸುಧಾಕರ್ ಅವರ ಚಿತ್ತ ಇದೀಗ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಬಂದು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಈ ನಡುವೆ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರು ಚಿಕ್ಕಬಳ್ಳಾಪು ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದು, ಮಗನಿಗೆ ಟಿಕೆಟ್ ಕೊಡಿಸುವ ಪ್ರಯತ್ನದ ಭಾಗವಾಗಿ ಮತ್ತು ಕೇಂದ್ರದ ನಾಯಕರು ತನ್ನ ಮಗನನ್ನು ಗುರುತಿಸುವಂತೆ ಮಾಡಲು ಕಾರು ರ್ಯಾಲಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ, ಮಾ.3: ವಿಧಾನಸಭೆ ಸೋಲಿನ ಬಳಿಕ ಡಾ.ಕೆ. ಸುಧಾಕರ್ (Dr.K.Sudhakar) ಅವರ ಚಿತ್ತ ಇದೀಗ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. ಈಗಾಗಲೇ ಬಿಜೆಪಿ (BJP) ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಬಂದು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಈ ನಡುವೆ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath) ಅವರು ಚಿಕ್ಕಬಳ್ಳಾಪುರ (Chikkaballapur) ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದು, ಮಗನಿಗೆ ಟಿಕೆಟ್ ಕೊಡಿಸುವ ಪ್ರಯತ್ನದ ಭಾಗವಾಗಿ ಮತ್ತು ಕೇಂದ್ರದ ನಾಯಕರು ತನ್ನ ಮಗನನ್ನು ಗುರುತಿಸುವಂತೆ ಮಾಡಲು ಕಾರು ರ್ಯಾಲಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕದಿಂದ ನಮೋ ವಿಜಯಸಂಕಲ್ಪ ಯಾತ್ರೆ ಹೆಸರಲ್ಲಿ ಸಾವಿರಾರು ಕಾರುಗಳ ಮೂಲಕ ಇಡೀ ಕ್ಷೇತ್ರದ್ಯಾಂತ ಬೃಹತ್ ರ್ಯಾಲಿ ಮಾಡುವ ಮೂಲಕ ಮಗನ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಯಲಂಕದಿಂದ ಆರಂಭವಾದ ಕಾರುಗಳ ರ್ಯಾಲಿ ದೊಡ್ಡಬಳ್ಳಾಪುರ-ಗೌರಿಬಿದನೂರು-ಗುಡಿಬಂಡೆ-ಬಾಗೇಪಲ್ಲಿ- ಚಿಕ್ಕಬಳ್ಳಾಪುರ-ದೇವನಹಳ್ಳಿ- ಹೊಸಕೋಟೆ ಗೆ ತಲುಪುವ ಮೂಲಕ ಭರ್ಜರಿ ರ್ಯಾಲಿ ನಡೆಸಿ ಮಗ ಅಖಾಡಕ್ಕಿಳಿಯೋಕೆ ಸರ್ವ ಸನ್ನದ್ದರಾಗುತ್ತಿದ್ದಾರೆ.
ಇದನ್ನೂ ಓದಿ: ಮರಳಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸುಧಾಕರ್, ಎಲ್ಲಾ ಗೊಂದಲಗಳಿಗೆ ತೆರೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲೂ ಭರಪೂರ ಮೆರವಣಿಗೆ ನಡೆಸಿದ್ದು, ಬಾಗೇಪಲ್ಲಿ ಯ ಬೀಚಗಾನಹಳ್ಳಿ ಬಳಿ ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಚಿಕನ್ ಸಾಂಬಾರ್ ಕೋಳಿ ಮೊಟ್ಟೆ ಬಾಳೆಹಣ್ಣು ಅಂತ ಬಾಡೂಟ ಸಹ ಹಾಕಿಸಿದರು. ಇನ್ನೂ ಟಿಕೆಟ್ ವಿಚಾರದಲ್ಲಿ ತಮ್ಮ ಎದುರಾಳಿ ಮಾಜಿ ಸಚಿವ ಸುಧಾಕರ್ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಸೇಬುಗಳ ಹಾರದ ಮೂಲಕ ವಿಶ್ವನಾಥ್ ಹಾಗೂ ಮಗ ಅಲೋಕ್ ವಿಶ್ವನಾಥ್ ಅವರನ್ನ ಬರಮಾಡಿಕೊಂಡು ಅದ್ದೂರಿ ಸ್ವಾಗತ ಕೋರಲಾಯಿತು. ಚಿಕ್ಕಬಳ್ಳಾಪುರ ನಗರದಲ್ಲಿ ತೆರೆದ ವಾಹನದಲ್ಲೇ ಮೆರವಣಿಗೆ ನಡೆಸುವ ಮೂಲಕ ಎಸ್ ಆರ್ ವಿಶ್ವನಾಥ್ ಮಾಜಿ ಸಚಿವ ಸುಧಾಕರ್ಗೆ ಸೆಡ್ಡು ಹೊಡೆದರು.
ಸುಧಾಕರ್-ವಿಶ್ವನಾಥ್ ನಡುವೆ ಮುನಿಸು
ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸೆಡ್ಡು ಹೊಡೆದಿರುವ ಎಸ್.ಆರ್.ವಿಶ್ವನಾಥ್ ಚಿಕ್ಕಬಳ್ಳಾಪುರದಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಲೋಕಸಭಾ ಟಿಕೆಟ್ ವಿಚಾರದಲ್ಲಿ ಪರಸ್ಪರ ಮುನಿಸಿಕೊಂಡಿದ್ದಾರೆ. ಸುಧಾಕರ್ ಚಿಕ್ಕಬಳ್ಳಾಪುರದ ಮೂಲಕ ರಾಷ್ಟ್ರರಾಜಕಾರಣಕ್ಕೆ ಹೋಗುವ ಪ್ಲಾನ್ ಮಾಡಿಕೊಳ್ಳುತ್ತಿದ್ದರೆ, ಇತ್ತ, ವಿಶ್ವನಾಥ್ ಅವರು ಪುತ್ರನನ್ನು ಸಂಸತ್ಗೆ ಕಳುಹಿಸಲು ಕ್ಷೇತ್ರದಲ್ಲಿ ರ್ಯಾಲಿ ನಡೆಸುತ್ತಿದ್ದಾರೆ.
ಎಸ್ಆರ್ ವಿಶ್ವನಾಥ್ಗೆ ಬೃಹತ್ ಸೇಬಿನ ಹಾರ; ಇದಕ್ಕಾಗಿ ಕಾರ್ಯಕರ್ತರ ಕಿತ್ತಾಟ
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಸ್.ಆರ್ ವಿಶ್ವನಾಥ್ ಹಾಗೂ ಬಿಜೆಪಿ ಮುಖಂಡರಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಬಳಿಕ ಈ ಸೇಬಿನ ಹಾರದಿಂದ ಸೇಬು ಕಿತ್ತು ತಿನ್ನಲು ಕಾರ್ಯಕರ್ತರು ಮುಗಿಬಿದ್ದರು.
ಒಟ್ಟಾರೆಯಾಗಿ, ಟಿಕೆಟ್ ಘೋಷಣೆಗೂ ಮುನ್ನವೇ ನರೇಂದ್ರ ಮೋದಿಯೇ ನಮ್ಮ ಅಭ್ಯರ್ಥಿ ಅಂತ ಶಾಸಕ ಎಸ್ ಅರ್ ವಿಶ್ವನಾಥ್ ತಮ್ಮ ಮಗನ ಪರ ಚುನಾವಣಾ ಪ್ರಚಾರ ನಡೆಸುವ ಮೂಲಕ ಇಡೀ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Sun, 3 March 24