ಡಾ ಕೆ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುವ ವದಂತಿಯನ್ನು ಅಲ್ಲಗಳೆದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
2019 ರಲ್ಲಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಅವರು ಬೇರೆ ಕೆಲ ನಾಯಕರೊಂದಿಗೆ ದಂಗೆಯೆದ್ದು ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸುಧಾಕರ್ ನಿಸ್ಸಂದೇಹವಾಗಿ ಭ್ರಮನಿರಸನಗೊಂಡಿದ್ದಾರೆ. ಹಾಗಾಗೇ, ವಾಪಸ್ಸು ಹೋಗುವ ಬಗ್ಗೆ ಅವರಲ್ಲಿ ತಾಕಲಾಟ ನಡೆದಿದ್ದರೆ ಆಶ್ಚರ್ಯವಿಲ್ಲ
ಮೈಸೂರು: ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಗೊಂದಲದ್ಲಲಿದ್ದಾರೆ ಮತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುವ ವದಂತಿ ದಿನೇದಿನೆ ದಟ್ಟವಾಗುತ್ತಿದೆ. ನಿಮಗೆ ಚೆನ್ನಾಗಿ ಗೊತ್ತಿದೆ, ಕಾಂಗ್ರೆಸ್ ನಲ್ಲಿದ್ದಾಗ ಅವರು ಸಿದ್ದರಾಮಯ್ಯನವರ (Siddaramaiah) ಆಪ್ತವಲಯದಲ್ಲಿ ಗುರುತಿಸಿಕೊಂಡವರು. 2019 ರಲ್ಲಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಅವರು ಬೇರೆ ಕೆಲ ನಾಯಕರೊಂದಿಗೆ ದಂಗೆಯೆದ್ದು ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸುಧಾಕರ್ ನಿಸ್ಸಂದೇಹವಾಗಿ ಭ್ರಮನಿರಸನಗೊಂಡಿದ್ದಾರೆ. ಹಾಗಾಗೇ, ವಾಪಸ್ಸು ಹೋಗುವ ಬಗ್ಗೆ ಅವರಲ್ಲಿ ತಾಕಲಾಟ ನಡೆದಿದ್ದರೆ ಆಶ್ಚರ್ಯವಿಲ್ಲ. ಇದೇ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಮೈಸೂರಲ್ಲಿ ಇಂದು ಪ್ರಶ್ನಿಸಿದಾಗ ಊಹಾಪೋಹದ ಸಂಗತಿಗಳಿಗೆ ಉತ್ತರ ನೀಡಲ್ಲ ಎಂದು ಹೇಳಿದರು. ಅವರು ಮತ್ತೊಮ್ಮೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಲ್ಲ 28 ಕ್ಷೇತ್ರಗಳಲ್ಲಿ ಅತ್ಯುತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಮತ್ತು ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ