Karnataka Budget Session:  ಸಾಕ್ಷ್ಯ ನೀಡಲು ತನಿಖಾ ಆಯೋಗದ ಮುಂದೆ ಬಸನಗೌಡ ಪಾಟೀಲ್ ಹಾಜರಾಗಿಲ್ಲ: ಪ್ರಿಯಾಂಕ್ ಖರ್ಗೆ, ಸಚಿವ

Karnataka Budget Session:  ಸಾಕ್ಷ್ಯ ನೀಡಲು ತನಿಖಾ ಆಯೋಗದ ಮುಂದೆ ಬಸನಗೌಡ ಪಾಟೀಲ್ ಹಾಜರಾಗಿಲ್ಲ: ಪ್ರಿಯಾಂಕ್ ಖರ್ಗೆ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 22, 2024 | 12:32 PM

Karnataka Budget Session: ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರ ನೀಡುತ್ತಿದ್ದಾಗ ಯತ್ನಾಳ್ ಎದ್ದು ನಿಂತು ವಿಷಯ ಬಿಟ್ಟು ಬೇರೆ ಏನೇನೋ ಮಾತಾಡ್ತೀರಿ, ಆಡಿದ ಮಾತಿಗೆ ಬದ್ಧರಾಗಿರುವುದಿಲ್ಲ, ಬಿಜೆಪಿ ಸರ್ಕಾರ ವಿರುದ್ಧ 40 ಪರ್ಸೆಂಟ್ ಕಮೀಶನ್ ಆರೋಪ ಮಾಡಿ ತನಿಖೆ ಮಾಡಿಸುವ ಗೋಜಿಗೆ ಹೋಗಲ್ಲ, ಪಿಎಸ್ಐ ನೇಮಕಾತಿ ಹಗರಣನ ತನಿಖೆ ಯಾರು ಮಾಡುತ್ತಿದ್ದಾರೋ ಯಾವ ಹಂತದಲ್ಲಿದೆಯೋ ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ.

ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಕಾಂಗ್ರೆಸ್ ಪಕ್ಷದ ಶಾಸಕರಿಗೂ ನಾಯಕರೇ? ನಮಗಂತೂ ಗೊತ್ತಿಲ್ಲ ಮಾರಾಯ್ರೇ, ಸದನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೆ ಹೇಳಿ ಸದನದಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡಿಸಿದರು. ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರ ನೀಡುತ್ತಿದ್ದಾಗ ಯತ್ನಾಳ್ ಎದ್ದು ನಿಂತು ವಿಷಯ ಬಿಟ್ಟು ಬೇರೆ ಏನೇನೋ ಮಾತಾಡ್ತೀರಿ, ಆಡಿದ ಮಾತಿಗೆ ಬದ್ಧರಾಗಿರುವುದಿಲ್ಲ, ಬಿಜೆಪಿ ಸರ್ಕಾರ ವಿರುದ್ಧ 40 ಪರ್ಸೆಂಟ್ ಕಮೀಶನ್ (40 percent commission) ಆರೋಪ ಮಾಡಿ ತನಿಖೆ ಮಾಡಿಸುವ ಗೋಜಿಗೆ ಹೋಗಲ್ಲ, ಪಿಎಸ್ಐ ನೇಮಕಾತಿ ಹಗರಣನ ತನಿಖೆ ಯಾರು ಮಾಡುತ್ತಿದ್ದಾರೋ ಯಾವ ಹಂತದಲ್ಲಿದೆಯೋ ಯಾರಿಗೂ ಗೊತ್ತಿಲ್ಲ ಅಂತ ಹೇಳಿದಾಗ ಖರ್ಗೆ ತನಿಖೆ ನಡೆಯುತ್ತಿದೆ ಮತ್ತು ಜಸ್ಟೀಸ್ ವೀರಪ್ಪ ಆಯೋಗದ ಮುಂದೆ ಹಾಜರಾಗಿ ನೀವು ಸಾಕ್ಷ್ಯ ನೀಡಬೇಕಿತ್ತು ಅದರೆ ನೀವು ಹೋಗದೆ ತನಿಖೆಯನ್ನು ದೂರುತ್ತಿದ್ದೀರಿ, ವಿಚಾರಣೆಗೆ ತನ್ನನ್ನು ಕರೆದಿಲ್ಲ, ಕರೆದಿದ್ದರೆ ಹೋಗುತ್ತಿದೆ ಅಂತ ಹೇಳಿದಾಗ ಸಭಾಧ್ಯಕ್ಷರ ಪೀಠದಲಿದ್ದ ರುದ್ರಪ್ಪ ಲಮಾಣಿ ಬಜೆಟ್ ಮೇಲೆ ಮಾತಾಡಿ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ