ಸಿದ್ದರಾಮಯ್ಯ ಎಷ್ಟು ಅವಧಿಗೆ ಮುಖ್ಯಮಂತ್ರಿ ಅಂತ ಕೇವಲ ನಾಲ್ವರಿಗೆ ಮಾತ್ರ ಗೊತ್ತು: ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿಪರ, ಜನಪರ ಮತ್ತು ಶ್ರೀಸಾಮಾನ್ಯನ ಬಜೆಟ್ ಮಂಡಿಸಿದ್ದಾರೆ. ವಿಧಾನಸಭೆಯೊಳಗೆ ಅಧಿವೇಶನ ನಡೆಯುತ್ತಿದೆ. ಅದರ ಬಗ್ಗೆ ಮಾತಾಡಿ, ಚರ್ಚೆ ಮಾಡೋಣ ಎಂದು ಹೇಳಿದ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ 20 ಸ್ಥಾನ ಗೆಲ್ಲಲಿದೆ ಎಂದರು.
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಇಂದು ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿ (chief minister) ಮುಂದುವರಿಯುವ ಬಗ್ಗೆ ಕೇಳಿದ ಪ್ರಶ್ನೆಗೆ ಬೇಸರ ವ್ಯಕ್ತಪಡಿಸಿದರು. ಅದು ಸಹಜವೂ ಆಗಿತ್ತು ಬಿಡಿ, ಯಾಕೆಂದರೆ ಈ ಪ್ರಶ್ನೆಯನ್ನು ಅವರಿಗೆ ಹಲವಾರು ಬಾರಿ ಕೇಳಲಾಗಿದೆ. ಇದಕ್ಕೂ ಮೊದಲು ಕೊಟ್ಟ ಉತ್ತರವನ್ನೇ ಈಗಲೂ ಹೇಳುತ್ತೇನೆ. ಯಾರು ಎಷ್ಟು ಅವಧಿಯವರೆಗೆ ಮುಂದುವರಿಯುತ್ತಾರೆ, ಡಿಕೆ ಶಿವಕುಮಾರ್ ಯಾವಾಗ ಆಗುತ್ತಾರೆ ಅಂತ ಕೇವಲ ನಾಲ್ವರಿಗೆ ಮಾತ್ರ ಗೊತ್ತು, ಅವರ ನಡುವೆ ಏನು ಮಾತುಕತೆ ನಡೆದಿದೆ ಅಂತ ಬೇರೆ ಯಾರಿಗೂ ಗೊತ್ತಿಲ್ಲ ಮತ್ತು ಅದರ ಬಗ್ಗೆ ವಿಶ್ಲೇಷಣೆ ಮಾಡುವ ಅಧಿಕಾರವೂ ನನಗಿಲ್ಲ ಎಂದು ಖರ್ಗೆ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿಪರ, ಜನಪರ ಮತ್ತು ಶ್ರೀಸಾಮಾನ್ಯನ ಬಜೆಟ್ ಮಂಡಿಸಿದ್ದಾರೆ. ವಿಧಾನಸಭೆಯೊಳಗೆ ಅಧಿವೇಶನ ನಡೆಯುತ್ತಿದೆ. ಅದರ ಬಗ್ಗೆ ಮಾತಾಡಿ, ಚರ್ಚೆ ಮಾಡೋಣ ಎಂದು ಹೇಳಿದ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ 20 ಸ್ಥಾನ ಗೆಲ್ಲಲಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ