ಎಐಸಿಸಿ ಅಧ್ಯಕ್ಷನ ಸ್ಥಾನ ಈ ಬಾರಿ ಒಬ್ಬ ಕನ್ನಡಿಗನಿಗೆ ಸಿಗಲಿದೆಯೇ?

ಎಐಸಿಸಿ ಅಧ್ಯಕ್ಷನ ಸ್ಥಾನ ಈ ಬಾರಿ ಒಬ್ಬ ಕನ್ನಡಿಗನಿಗೆ ಸಿಗಲಿದೆಯೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2022 | 5:23 PM

ಖರ್ಗೆ ಅವರು ಆಯ್ಕೆಯಾಗೋದು ಹೆಚ್ಚು ಕಡಿಮೆ ಖಚಿತ ಅನ್ನಲಾಗುತ್ತಿದೆ. ಹಾಗಾದಲ್ಲಿ, ಅವರು ಆ ಸ್ಥಾನವನ್ನು ಅಲಂಕರಿಸುವ ಮೊದಲ ಕನ್ನಡಿಗ ಅನಿಸಲಿದ್ದಾರೆ.

New Delhi: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (M Mallikarjun Kharge) ನಿಸ್ಸಂದೇಹವಾಗಿ ಒಬ್ಬ ನಿಷ್ಠಾವಂತ ಕಾರ್ಯಕರ್ತ. ತಮ್ಮ ರಾಜಕೀಯ ಬದುಕನ್ನೆಲ್ಲ ಪಕ್ಷಕ್ಕಾಗಿ ಸವೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಎರಡು ಮೂರು ಬಾರಿ ಅವರ ಕೈತಪ್ಪಿತ್ತು. ಅವರಿಗೆ ಈಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) (AICC) ಆಧ್ಯಕ್ಷರಾಗುವ ಅವಕಾಶ ಬಂದೊದಗಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಎಐಸಿಸಿ ಅಧ್ಯಕ್ಷನ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ರಾತ್ರೋರಾತ್ರಿ ನಡೆದ ಬೆಳವಣಿಗೆಯೊಂದರಲ್ಲಿ ಖರ್ಗೆ ಅವರಿಗೆ ನಾಮಪತ್ರ ಸಲ್ಲಿಸುವ ಸಂದರ್ಭ ಸೃಷ್ಟಿಯಾಗಿದೆ. ಅವರು ಆಯ್ಕೆಯಾಗೋದು ಹೆಚ್ಚು ಕಡಿಮೆ ಖಚಿತ ಅನ್ನಲಾಗುತ್ತಿದೆ. ಹಾಗಾದಲ್ಲಿ, ಅವರು ಆ ಸ್ಥಾನವನ್ನು ಅಲಂಕರಿಸುವ ಮೊದಲ ಕನ್ನಡಿಗ ಅನಿಸಲಿದ್ದಾರೆ.