ಸ್ವಲ್ಪ ಹೊತ್ತು ನಡೆದು ಸುಸ್ತಾದ ಸಿದ್ದರಾಮಯ್ಯ, ರಾಹುಲ್ ಅನುಮತಿ ಪಡೆದು ಭಾರತ್ ಜೋಡೋ ಯಾತ್ರೆಯಿಂದ ಹಿಂದೆ ಸರಿದರು!
ಮೊನ್ನೆಯಷ್ಟೇ ತಮ್ಮ 75ನೇ ಜನ್ಮದಿನೋತ್ಸವವನ್ನು ಆಚರಿಸಿಕೊಂಡ ಸಿದ್ದರಾಮಯ್ಯನವರು ಸ್ವಲ್ಪ ಹೊತ್ತು ನಡೆದ ಬಳಿಕ ಸುಸ್ತಾಗುತ್ತಿದ್ದಾರೆ. ರಾಹುಲ್ ಗಮನಕ್ಕೆ ತಂದು ಅವರು ಯಾತ್ರೆಯಿಂದ ಹಿಂದೆ ಸರಿಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಚಾಮರಾಜನಗರ: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ (Bharat Jodo Yatra) ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಜೊತೆ ಸಿದ್ದರಾಮಯ್ಯ (Siddaramaiah), ಬಿಕೆ ಹರಿಪ್ರಸಾದ್, ಸಲೀಂ ಅಹ್ಮದ್, ಪ್ರಿಯಾಂಕ್ ಖರ್ಗೆ ಮೊದಲಾದವರೆಲ್ಲ ಚಾಮರಾಜನಗರ ಜಿಲ್ಲೆಯಲ್ಲಿ ಭರದಿಂದ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಮೊನ್ನೆಯಷ್ಟೇ ತಮ್ಮ 75ನೇ ಜನ್ಮದಿನೋತ್ಸವವನ್ನು ಆಚರಿಸಿಕೊಂಡ ಸಿದ್ದರಾಮಯ್ಯನವರು ಸ್ವಲ್ಪ ಹೊತ್ತು ನಡೆದ ಬಳಿಕ ಸುಸ್ತಾಗುತ್ತಿದ್ದಾರೆ. ರಾಹುಲ್ ಗಮನಕ್ಕೆ ತಂದು ಅವರು ಯಾತ್ರೆಯಿಂದ ಹಿಂದೆ ಸರಿಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
Latest Videos