ನೇಹಾ ಕೊಲೆಯ ಬಳಿಕ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಟ್ರಾನ್ಸ್ ಫರ್ ಆಗಿದ್ದರೆ ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ: ನಿರಂಜನ್ ಹಿರೇಮಠ

|

Updated on: May 15, 2024 | 5:18 PM

ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಡ್ರಗ್ಸ್ ಧಂದೆ ಎಗ್ಗಿಲ್ಲದೆ ನಡೆಯುತ್ತಿರುವಂತೆಯೇ ಬೇರೆಲ್ಲ ಕಳ್ಳ ವ್ಯವಹಾರಗಳನ್ನು ತಡೆಯುವವರು ಯಾರೂ ಇಲ್ಲ. ನೇಹಾ ಕೊಲೆ ನಡೆದಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರನ್ನು ಟ್ರಾನ್ಸ್ ಫರ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ ನಿರಂಜನ್ ನೇಹಾ ಹಂತಕನ್ನು ಎನ್ ಕೌಂಟರ್ ನಲ್ಲಿ ಗತಿ ಕಾಣಿಸಿದ್ದರೆ ಅಂಜಲಿಯ ಕೊಲೆ ನಡೆಯುತ್ತಿರಲಿಲ್ಲ ಎಂದರು.

ಹುಬ್ಬಳ್ಳಿ: ತನ್ನ ಮಗಳು ನೇಹಾ ಹಿರೇಮಠಳಂತೆ (Neha Hiremath) ಅಂಜಲಿಯ (Anjali) ಕೊಲೆಯಾಗಿರುವುದಕ್ಕೆ ಪೊಲೀಸ್ ಮತ್ತು ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ (Niranjan Hiremath) ಹೇಳಿದರು. ನಗರದಲ್ಲಿ ಇಂದು ಬೆಳಗ್ಗೆ ಕೊಲೆಯಾದ ಅಂಜಲಿಯ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನಿರಂಜನ, ನನ್ನ ಮಗಳ ಹತ್ಯೆಯಾಗಿ ಕೇವಲ 15 ದಿನಗಳ ನಂತರ ಅದೇ ಮಾದರಿಯಲ್ಲಿ ಮತ್ತೊಬ್ಬ ಯುವತಿಯ ಕೊಲೆ ನಡೆದರೆ ಅದು ಪೊಲೀಸ್ ವೈಫಲ್ಯವಲ್ಲದೆ ಮತ್ತೇನು? ಗೃಹ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ನನ್ನ ಮಗಳ ಬರ್ಬರವಾಗಿ ಕೊಲೆಯಾದಾಗ ಗೃಹ ಸಚಿವರು ಸೌಜನ್ಯಾಕ್ಕಾದರೂ ನಂಗೊಂದು ಫೋನ್ ಮಾಡಲಿಲ್ಲ ಎಂದು ನಿರಂಜನ್, ಪರಮೇಶ್ವರ್ ವಿರುದ್ಧ ಕಿಡಿ ಕಾರಿದರು. ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಡ್ರಗ್ಸ್ ಧಂದೆ ಎಗ್ಗಿಲ್ಲದೆ ನಡೆಯುತ್ತಿರುವಂತೆಯೇ ಬೇರೆಲ್ಲ ಕಳ್ಳ ವ್ಯವಹಾರಗಳನ್ನು ತಡೆಯುವವರು ಯಾರೂ ಇಲ್ಲ. ನೇಹಾ ಕೊಲೆ ನಡೆದಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರನ್ನು ಟ್ರಾನ್ಸ್ ಫರ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ ನಿರಂಜನ್ ನೇಹಾ ಹಂತಕನ್ನು ಎನ್ ಕೌಂಟರ್ ನಲ್ಲಿ ಗತಿ ಕಾಣಿಸಿದ್ದರೆ ಅಂಜಲಿಯ ಕೊಲೆ ನಡೆಯುತ್ತಿರಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ತಂದೆ ಕೊಲೆಗೂ ಯತ್ನಿಸಿದ್ದ ಫಯಾಜ್, ಕ್ಷಮೆ ಬೇಡ ಗಲ್ಲಿಗೇರಿಸಿ ಎಂದ ನಿರಂಜನ ಹಿರೇಮಠ

Follow us on