ಸ್ವಾಮೀಜಿ ಅಥವಾ ಬೇರೆಯವರ ಫೋನ್ ಟ್ಯಾಪ್ ಮಾಡಿಸುವ ಅವಶ್ಯಕತೆ ನನಗಿರಲಿಲ್ಲ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರ ರಚನೆಯಾದ ಮರುದಿನದಿಂದಲೇ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಲಹ ಆರಂಭವಾಗಿತ್ತು, ಜಗಳ ಯಾಕೆ ಶುರುವಾಯಿತು, ಯಾರಿಗೋಸ್ಕರ ಶುರವಾಯಿತು ಅನ್ನೋದನ್ನು ಜನ ಯೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು. ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರದಾದರೂ ಫೋನ್ ಟ್ಯಾಪ್ ಮಾಡುವಂತೆ ಯಾವ ಅಧಿಕಾರಿಗೂ ಆದೇಶ ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಂಡ್ಯ: ಶ್ರೀ ನಿರ್ಮಲಾನಂದ ಸ್ವಾಮೀಜಿಯವರ (Sri Nirmalanada Swamiji) ಫೋನ್ ಮಾಡಿಸುವ ಅಗತ್ಯ ತನಗಿರಲಿಲ್ಲ, ಅಂಥ ದುಸ್ಸಾಹಸಕ್ಕೆ ತಾನ್ಯಾವತ್ತೂ ಕೈ ಹಾಕಿಲ್ಲ, ಫೋನ್ ಗಳನ್ನು ಟ್ಯಾಪ್ ಮಾಡುವ ಕೆಲಸ ತಾನು ಮಾಡಿದ್ದರೆ ತನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ (coalition government) ಉರುಳುತ್ತಿರಲಿಲ್ಲ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಇಂದು ಬೆಳಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ, ತಾನು ಪರಮಪೂಜ್ಯ ಸ್ವಾಮೀಜಿಯವರೊಂದಿಗೆ ಕಾಲಭೈರವೇಶ್ವರ ದೇವಸ್ಥಾನದ ಪ್ರತಿಷ್ಠಾನಗೋಸ್ಕರ ಅಮೆರಿಕಾಗೆ ಹೋಗಿದ್ದಾಗ, ಸರ್ಕಾರ ಉರುಳಿಸುವ ಪರ್ವ ಆರಂಭವಾಗಿತ್ತು. ಮೊದಲು ಅನಂದ್ ಸಿಂಗ್ ರಾಜೀನಾಮೆ ಸಲ್ಲಿಸಿದಾಗ, ಕಾಂಗ್ರೆಸ್ ನಾಯಕರು ನನಗೆ ಫೋನ್ ಮಾಡಿ, ಚಿಂತಿಸುವ ಅವಶ್ಯಕತೆಯಿಲ್ಲ, ನಾವೆಲ್ಲ ನಿಭಾಯಿಸುತ್ತೇವೆ ಅಂತ ಹೇಳಿದ್ದರು. ಫೋನ್ ಟ್ಯಾಪ್ ಮಾಡಿಸುವುದಾದರೆ ತಮ್ಮ ಮತ್ತು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದ ಶಾಸಕ ಮತ್ತು ಮಂತ್ರಿಗಳನ್ನು ಟಾರ್ಗೆಟ್ ಮಾಡಿರುತ್ತಿದ್ದೆ. ಸರ್ಕಾರ ರಚನೆಯಾದ ಮರುದಿನದಿಂದಲೇ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಲಹ ಆರಂಭವಾಗಿತ್ತು, ಜಗಳ ಯಾಕೆ ಶುರುವಾಯಿತು, ಯಾರಿಗೋಸ್ಕರ ಶುರವಾಯಿತು ಅನ್ನೋದನ್ನು ಜನ ಯೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು. ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರದಾದರೂ ಫೋನ್ ಟ್ಯಾಪ್ ಮಾಡುವಂತೆ ಯಾವ ಅಧಿಕಾರಿಗೂ ಆದೇಶ ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮನೆ ಹೆಣ್ಣುಮಕ್ಕಳ ಮೇಲೆ ಸದಾ ನಿಗಾ ಇಟ್ಟಿರಬೇಕೆನ್ನುವ ಶಿವಕುಮಾರ್ ನಿಂದ ನಾನೇನೂ ಕಲಿಯಬೇಕಿಲ್ಲ: ಹೆಚ್ ಡಿ ಕುಮಾರಸ್ವಾಮಿ