ಭೈರತಿ ಸುರೇಶ್ ಆರೋಪ ಮಾಡಿದರೆ ಸಾಲದು ದಾಖಲೆ ತೋರಿಸಲಿ: ಬಸನಗೌಡ ಯತ್ನಾಳ್, ಶಾಸಕ

|

Updated on: Jul 25, 2024 | 10:20 AM

ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರೆಲ್ಲ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮಗಳು ನಡೆದಿದ್ದರೆ ಅವುಗಳ ಬಗ್ಗೆಯೂ ಚರ್ಚೆ ನಡೆಯಬೇಕು ಮತ್ತು ತನಿಖೆಯಾಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಂಗಳೂರು: ಕಳೆದ ರಾತ್ರಿ ಮುಡಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ನಾಯಕರು ಇಂದು ಬೆಳಗ್ಗೆ ಸೌಧದ ಸುತ್ತ ಮಾರ್ನಿಂಗ್ ವಾಕ್ ಮಾಡಿದರು. ವಾಕ್ ಮಾಡುತ್ತ ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಡಾ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಬೇರೆ ಪಕ್ಷಗಳ ನಾಯಕರನ್ನೂ ರಕ್ಷಿಸುತ್ತಿದ್ದಾರೆ ಎಂದರು. ಈ ಪ್ರಕರಣದಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಸೈಟು ಮತ್ತು ಜಮೀನು ಪಡೆದುಕೊಳ್ಳಲಾಗಿದೆ, ಅದನ್ನು ಕೇವಲ ಕಾಂಗ್ರೆಸ್ ನಾಯಕರು ಮಾಡಿಲ್ಲ, ಬೇರೆ ಪಕ್ಷಗಳ ನಾಯಕರೂ ಹಾಗೆ ಮಾಡಿದ್ದಾರೆ. ಎಕರೆಗಟ್ಟಲೆ ಜಮೀನು ಪಡೆದುಕೊಳ್ಳಲಾಗಿದೆ ಎಂದು ನಿನ್ನೆ ಸದನದಲ್ಲಿ ಸಚಿವ ಭೈರತಿ ಸುರೇಶ್ ಆರೋಪ ಮಾಡಿದ್ದಾರೆ. ಅವರು ಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಯಾರೆಲ್ಲ ಮತ್ತು ಯಾವೆಲ್ಲ ಪಕ್ಷಗಳ ನಾಯಕರು ಅಕ್ರಮವಾಗಿ ಸೈಟು ಪಡೆದಿದ್ದಾರೆ ಅಂತ ದಾಖಲೆ ತೋರಿಸಲಿ, ಎಲ್ಲವೂ ತನಿಖೆಯಾಗಲಿ ಎಂದು ಯತ್ನಾಳ್ ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Assembly Session: ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗುತ್ತಿಲ್ಲವೆಂದು ಸದನದಲ್ಲಿ ಬಿಜೆಪಿ ನಾಯಕರ ಆಕ್ರೋಶ

Follow us on