ಕುಮಾರಸ್ವಾಮಿಯವರಿಂದ ನೀತಿಸಂಹಿತೆ ಉಲ್ಲಂಘನೆಯಾಗಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು: ಚುನಾವಣಾಧಿಕಾರಿ
ಅಲ್ಲಿ ಕುಟುಂಬದ ಸದಸ್ಯರು ಹೊರತುಪಡಿಸಿ ಹೊರಗಿನವರು ಯಾರಾದರೂ ಇದ್ದರೆ ಅನ್ನೋದನ್ನ ಎಫ್ ಎಸ್ ಟಿ ತಂಡ ಪರಿಶೀಲನೆ ನಡೆಸುತ್ತಿದೆ. ಒಂದು ಪಕ್ಷ ಹೊರಗಿನವರು ಒಳಗಡೆ ಊಟಕ್ಕೆ ಬಂದಿದ್ದರೆ ಅದು ಮತದಾರರಿಗೆ ಅಮಿಶವೊಡ್ಡಿದಂತೆ ಆಗುತ್ತದೆ ಮತ್ತು ನೀತಿ ಸಂಹಿತೆಯ ಉಲ್ಲಂಘನೆ ಅನಿಸಿಕೊಳ್ಳುತ್ತದೆ ಎಂದು ಅಧಿಕಾರಿ ಹೇಳಿದರು.
ರಾಮನಗರ: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ತೋಟದ ಮನೆಯಲ್ಲಿ ಅನುಮತಿಯಿಲ್ಲದೆ ಔತಣ ಕೂಟ (feast) ಏರ್ಪಡಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಚುನಾವಣಾಧಿಕಾರಿಗಳ ತಂಡದ ಮುಖ್ಯಸ್ಥ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಮೇಶ್ (Ramesh, assistant election officer, Magadi Assembly segment) ಘಟನೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಔತಣಕೂಟ ಏರ್ಪಾಟು ಮಾಡುವುದಾದರೆ ಕುಮಾರಸ್ವಾಮಿಯವರು ಅನುಮತಿ ತೆಗೆದುಕೊಳ್ಳಬೇಕಿತ್ತು ಆದರೆ ಅವರು ತೆಗೆದುಕೊಂಡಿಲ್ಲ, ಕುಮಾರಸ್ವಾಮಿಯವರು ಕೇವಲ ಕುಟುಂಬದ ಸದಸ್ಯರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿತ್ತು ಎನ್ನುತ್ತಾರೆ. ಅಲ್ಲಿ ಕುಟುಂಬದ ಸದಸ್ಯರು ಹೊರತುಪಡಿಸಿ ಹೊರಗಿನವರು ಯಾರಾದರೂ ಇದ್ದರೆ ಅನ್ನೋದನ್ನ ಎಫ್ ಎಸ್ ಟಿ ತಂಡ ಪರಿಶೀಲನೆ ನಡೆಸುತ್ತಿದೆ. ಒಂದು ಪಕ್ಷ ಹೊರಗಿನವರು ಒಳಗಡೆ ಊಟಕ್ಕೆ ಬಂದಿದ್ದರೆ ಅದು ಮತದಾರರಿಗೆ ಅಮಿಶವೊಡ್ಡಿದಂತೆ ಆಗುತ್ತದೆ ಮತ್ತು ನೀತಿ ಸಂಹಿತೆಯ ಉಲ್ಲಂಘನೆ ಅನಿಸಿಕೊಳ್ಳುತ್ತದೆ. ಒಳಗಡೆ ಕೇವಲ 7-8 ಜನ ಮಾತ್ರ ಕಾಣಿಸಿದ್ದಾರೆ ಎಂದು ಹೇಳಿದ ರಮೇಶ್ ಎಂಸಿಸಿಯ ಉಲ್ಲಂಘನೆ ಆಗಿದೆಯಾ ಇಲ್ಲವಾ ಅಂತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ, ಅಗಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿಯವರ ತೋಟದ ಮನೆಯ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ ದೃಶ್ಯಗಳು ಇಲ್ಲಿವೆ