ಪ್ರೆಸ್ನವರಿಗೆ ಹೈಕೋರ್ಟ್ ಪಕ್ಕ ಕ್ಲಬ್ ಇರಬಹುದಾದರೆ, ಶಾಸಕರಿಗೆ ಬಾಲಬ್ರೂಯಿ ಕಟ್ಟಡದಲ್ಲಿ ಕ್ಲಬ್ ಯಾಕಾಗಬಾರದು? ಸಿದ್ದರಾಮಯ್ಯ
ದಶಕಗಳಿಂದ ಅತಿಥಿಗೃಹವಾಗಿರುವ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಬಾಲಬ್ರೂಯಿ ಕಟ್ಟಡವನ್ನು ಶಾಸಕರಿಗೆ ಕ್ಲಬ್ ಆಗಿ ಪರಿವರ್ತಿಸುವ ಪ್ರಸ್ತಾಪ ಮಾಡಲಾಗಿದೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿದರು. ಈ ಸಂದರ್ಭದದಲ್ಲಿ ಅವರಿಗೆ ಮಾಧ್ಯಮದವರು ಎರಡು ಇಕ್ಕಟ್ಟಿನ ಪ್ರಶ್ನೆ ಕೇಳಿದರು. ಮೊದನೆಯದ್ದು ಬೆಂಗಳೂರನಲ್ಲಿ ಮಳೆಯಾದಾಗ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಈಗಲೂ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರೋದು ಮತ್ತು ಎರಡನೇಯದ್ದು ಅಂದಕಾಲತ್ತಿಲ್ ಅತಿಥಿಗೃಹವಾಗಿರುವ ಬಾಲಬ್ರೂಯಿ ಕಟ್ಟಡವನ್ನು ಶಾಸಕರ ಕ್ಲಬ್ ಆಗಿ ಪರಿವರ್ತಿಸುತ್ತಿರುವ ಬಗ್ಗೆ. ಮೊದಲು ಎರಡನೇ ಪ್ರಶ್ನೆಗೆ ಅವರು ಕೊಟ್ಟ ಉತ್ತರವನ್ನು ನೋಡೋಣ.
ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ದಶಕಗಳಿಂದ ಅತಿಥಿಗೃಹವಾಗಿರುವ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಬಾಲಬ್ರೂಯಿ ಕಟ್ಟಡವನ್ನು ಶಾಸಕರಿಗೆ ಕ್ಲಬ್ ಆಗಿ ಪರಿವರ್ತಿಸುವ ಪ್ರಸ್ತಾಪ ಮಾಡಲಾಗಿದೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ಸಿದ್ದರಾಮಯ್ಯನವರ ನಿಲುವನ್ನು ಮಾಧ್ಯಮದವರು ಪ್ರಶ್ನಿಸಿದಾಗ, ತಮ್ಮ ನೇರಾನೇರ ಮಾತಿಗೆ ಹೆಸರಾಗಿರುವ ಸಿದ್ದರಾಮಯ್ಯನವರು, ಅದರಲ್ಲಿ ತಪ್ಪೇನು, ಯಾಕಾಗಬಾರದು ಎಂದು ಮರು ಸವಾಲು ಹಾಕಿದರು.
ಅಲ್ಲ ಸಾರ್ ಅದು ಐತಿಹಾಸಿಕ ಕಟ್ಟಡ, ಅನೇಕ ವರ್ಷಗಳಿಂದ ಅತಿಥಿ ಗೃಹವಾಗಿ ಉಳಿದುಕೊಂಡಿದೆ ಅಂತ ಪತ್ರಕರ್ತರು ಹೇಳಿದಾಗ ಸಿದ್ದರಾಮಯ್ಯ, ಏನು ಐತಿಹಾಸಿಕ? ಹಾಗಂದರೇನು? ಪ್ರೆಸ್ನವರಿಗೆ ಹೈಕೋರ್ಟ್ ಪಕ್ಕ ಕ್ಲಬ್ ಬೇಕು, ಶಾಸಕರಿಗೆ ಬಾಲಬ್ರೂಯಲ್ಲಿ ಬೇಡ ಅಂದರೆ ಹೇಗೆ? ಅಂತ ಹೇಳಿದರು. ಮಾಧ್ಯಮದವರು ಮತ್ತೇನೋ ಕೇಳಹೊರಟಾಗ ಅವರು, ‘ಹೋಗ್ರಯ್ಯ!’ ಅಂತ ಛೇಡಿಸುತ್ತಾ ಅಲ್ಲಿಂದ ಎದ್ದರು.
ಅದಕ್ಕೆ ಮೊದಲು ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು, ರಾಜಕಾಲುವೆಗಳ ಮೇಲೆ ಆಗಿರುವ ಒತ್ತುವರಿ, ಹೂಳು ಎತ್ತದಿರುವುದು ಕಾರಣ ಅಂತ ಹೇಳಿ, ತಾವು ಅಧಿಕಾರದಲ್ಲಿದ್ದಾಗ ಕಾಲುವೆಗಳಲ್ಲಿ ಹೂಳು ಎತ್ತುವ ಕಾರ್ಯ ಆರಂಭಿಸಿದ್ದನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರ ನಿಲ್ಲಿಸಿತು ಎಂದರು. ಮಳೆಯಿಂದ ಆಗುತ್ತಿರುವ ಅವಾಂತರಗಳಿಗೆ ಬಿ ಬಿ ಎಮ್ ಪಿಯನ್ನು ದೂಷಿಸಬೇಕು ಅಂತಲೂ ಅವರು ಹೇಳಿದರು.
ಇದನ್ನೂ ಓದಿ: Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?