ಮಗನ ಧ್ವನಿ ಆದ್ಭುತವಾಗಿದೆ ಅಂತ ದಿ ಲಯನ್ ಕಿಂಗ್ ಸಿನಿಮಾವನ್ನು ಹಿಂದಿಗೆ ಡಬ್ ಮಾಡುವಾಗ ಶಾ ರುಖ್ ಖಾನ್ ಹೇಳಿದ್ದರು!

ಮಗನ ಧ್ವನಿ ಆದ್ಭುತವಾಗಿದೆ ಅಂತ ದಿ ಲಯನ್ ಕಿಂಗ್ ಸಿನಿಮಾವನ್ನು ಹಿಂದಿಗೆ ಡಬ್ ಮಾಡುವಾಗ ಶಾ ರುಖ್ ಖಾನ್ ಹೇಳಿದ್ದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2021 | 6:57 PM

ಆರ್ಯನ್ ಧ್ವನಿ ಅದ್ಭುತವಾಗಿದೆ. ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅವರು ತನ್ನ ತಂದೆಯೊಂದಿಗೆ 2019ರಲ್ಲಿ ಬಿಡುಗಡೆಯಾದ ದಿ ಲಯನ್ ಕಿಂಗ್ ಚಿತ್ರದ ಹಿಂದೆ ಅವತರಿಣಿಕೆಗೆ ಡಬ್ ಮಾಡಿದ್ದರು.

ಮುಸ್ಲಿಂ ತಂದೆ ಶಾ ರುಖ್ ಖಾನ್ ಮತ್ತು ಹಿಂದೂ ತಾಯಿ ಗೌರಿ ಖಾನ್ ಸಂತಾನವಾಗಿರುವ ಆರ್ಯನ್ ಖಾನ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಮುಂಬೈ ಸಮುದ್ರ ತೀರದಲ್ಲಿ ಕ್ರೂಜ್ ಡ್ರಗ್ಸ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಆರ್ಯನ್ ರನ್ನು ಮುಂಬೈ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸಿದ ನಂತರ ಪೊಲೀಸರು ಬಂಧಿಸಿದ್ದಾರೆ. ಆರ್ಯನ್ ಹಿಂದೆ ಯಾವತ್ತೂ ವಿವಾದಕ್ಕೆ ಸಿಕ್ಕಿ ಹಾಕಿಕೊಂಡವರಲ್ಲ. ಅದರೆ, ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರ್ಯನ್ 4 ವರ್ಷಗಳಿಂದ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರಂತೆ.

ಭಾರತದ ಅತ್ಯಂತ ಜನಪ್ರಿಯ ನಟನ ಮಗನಾಗಿದ್ದರೂ ಆರ್ಯನ್ ಗೆ ಸಿನಿಮಾಗಳಲ್ಲಿ ನಟಿಸುವಾಸೆ ಇಲ್ಲ. ಮೈ ನೆಕ್ಸ್ಟ್ ಜನರೇಷನ್ ನೀಡ್ಸ್ ನೋ ಇಂಟ್ರೊಡಕ್ಷನ್ ಕಾರ್ಯಕ್ರಮದಲ್ಲಿ ಹಿಂದೊಮ್ಮೆ ಭಾಗಿಯಾಗಿದ್ದ ಶಾ ರುಖ್, ‘ನಿಮ್ಮ ಮಗ ನಿಮ್ಮಂತೆಯೇ ನಟನಾಗಲಿದ್ದಾನೆಯೇ ಎಂದು ಕೇಳಿದ ಪ್ರಶ್ನೆಗೆ, ‘ನೋಡೋದಿಕ್ಕೆ ಅವನು ಅಂದವಾಗೇ ಇದ್ದಾನೆ. ಎತ್ತರ ಮತ್ತು ಇತರ ಆಯಾಮಗಳು ಎಲ್ಲ ಓಕೆ, ಆದರೆ ನಟನಾಗುವ ಅರ್ಹತೆ ಅವನಲ್ಲಿಲ್ಲ ಅಂತ ನಾನಂದುಕೊಳ್ಳುತ್ತೇನೆ. ಮುಂಬರುವ ದಿನಗಳಲ್ಲಿ ಆವನಿಗೆ ಈ ಸಂಗತಿ ಮನದಟ್ಟಾಗುತ್ತದೆ. ಆದರೆ ಅವನೊಬ್ಬ ಉತ್ತಮ ಬರಹಗಾರ,’ಎಂದು ಹೇಳಿದ್ದರು.

ಆದರೆ ಆರ್ಯನ್ ಧ್ವನಿ ಅದ್ಭುತವಾಗಿದೆ. ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅವರು ತನ್ನ ತಂದೆಯೊಂದಿಗೆ 2019ರಲ್ಲಿ ಬಿಡುಗಡೆಯಾದ ದಿ ಲಯನ್ ಕಿಂಗ್ ಚಿತ್ರದ ಹಿಂದೆ ಅವತರಿಣಿಕೆಗೆ ಡಬ್ ಮಾಡಿದ್ದರು. ಅದರಲ್ಲಿ ಸಿಂಬಾ ಪಾತ್ರಕ್ಕೆ ಆರ್ಯನ್ ಧ್ವನಿ ನೀಡಿದ್ದರು. ಮುಫಾಸಾ ಪಾತ್ರಕ್ಕೆ ಧ್ವನಿಯಾಗಿದ್ದ ಶಾ ರುಖ್ ಮತ್ತು ಆರ್ಯನ್ ಧ್ವನಿಗಳಲ್ಲಿ ವ್ಯತ್ಯಾಸ ಹೆಚ್ಚಿಲ್ಲ. ಅದೇ ವರ್ಷ ಐಸಿಸಿ ವಿಶ್ವಕಪ್ ನಡೆಯುತ್ತಿದ್ದಾಗ ಶಾ ರುಖ್ ತಮ್ಮ ಮಗನನ್ನು ಅಪೂರ್ವವೆನಿಸುವ ರೀತಿಯಲ್ಲಿ ಪ್ರಪಂಚಕ್ಕೆ ಪರಿಚಯಿಸಿದ್ದರು. ಅವರಿಬ್ಬರು ಟೀಮ್ ಇಂಡಿಯಾದ ಜರ್ಸಿ ಧರಿಸಿದ್ದರು ಮತ್ತು ಅವುಗಳ ಮೇಲೆ ಮುಫಾಸಾ ಮತ್ತು ಸಿಂಬಾ ಅಂತ ಬರೆಯಲಾಗಿತ್ತು. ತನ್ನ ಮಗನ ಧ್ವನಿ ಬಹಳ ಚೆನ್ನಾಗಿದೆ ಎಂದು ಖಾನ್ ಹೇಳುತ್ತಾರೆ.

ಅಂತರ್ಧಮೀಯ ದಂಪತಿಯ ಮಗನಾಗಿರುವ ಆರ್ಯನ್ ಎರಡೂ ಧರ್ಮಗಳ ಮೇಲೆ ಸಮಾನ ನಂಬಿಕೆ ಇದೆಯಂತೆ.

ಇದನ್ನೂ ಓದಿ:  ‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​