ಸಿದ್ದರಾಮಯ್ಯರನ್ನು ಹೀಗೆಯೇ ಬಿಟ್ಟರೆ ರಾಜ್ಯದಲ್ಲಿ ಉರ್ದುವನ್ನು ಪ್ರಥಮ ಭಾಷೆಯಾಗಿಸುತ್ತಾರೆ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Dec 23, 2023 | 2:12 PM

ಒಬ್ಬ ಖ್ಯಾತ ಕನ್ನಡಪರ ಹೋರಾಟಗಾರನ ನಿದರ್ಶನ ಹೇಳಿದ ಬಸನಗೌಡ ಪಾಟೀಲ್, ಆತ ದೆಹಲಿಗೆ ಭೇಟಿ ನೀಡಿದ್ದಾಗ, ಹೋಟೆಲ್ ಒಂದಕ್ಕೆ ತಿಂಡಿ ತಿನ್ನಲು ಹೋಗಿ, ಸರ್ವರ್ ಗೆ ಏಕ್ ಪ್ಲೇಟ್ ಇಡ್ಲಿ-ವಡ ದೀಜಿಯೇ ಅಂತ ಹೇಳಿದನಂತೆ. ದೆಹಲಿಯಲ್ಲಿ ಆತ ಯಾಕೆ ಹಿಂದಿ ಮಾತಾಡಿದ್ದು? ಇಡ್ಲಿ-ವಡ ಕೊಡಿ ಅಂತ ಕನ್ನಡದಲ್ಲೇ ಅನ್ನಬೇಕಿತ್ತು ಅಂತ ಯತ್ನಾಳ್ ಹೇಳಿದ್ದು ಅತಾರ್ಕಿಕ ಮತ್ತು ಹಾಸ್ಯಾಸ್ಪದ ಅನಿಸಿತು.

ವಿಜಯಪುರ: ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದಿರುವ ಸಿದ್ದರಾಮಯ್ಯ (Siddaramaiah) ಟಿಪ್ಪು ಸುಲ್ತಾನನ ಮತ್ತೊಂದು ಅವತಾರ (reincarnation of Tipu Sultan) ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಶಾಸಕ, ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಮಾಡಿದರೆ ಕ್ಯಾತೆ ತೆಗೆಯುವ ಕಾಂಗ್ರೆಸ್ ನಾಯಕರು ತಾವೇನು ಮಾಡುತ್ತಿದ್ದಾರೆ? ಟಿಪ್ಪು ಸುಲ್ತಾನ್ ತನ್ನ ಸಾಮ್ರಾಜ್ಯದಲ್ಲಿ ಕನ್ನಡ ಭಾಷೆಯನ್ನು ತೆಗೆದುಹಾಕಿ ಪರ್ಷಿಯನ್ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡಿದ ಹಾಗೆ, ಸಿದ್ದರಾಮಯ್ಯರನ್ನು ಹೀಗೆಯೇ ಬಿಟ್ಟರೆ ರಾಜ್ಯದಲ್ಲಿ ಉರ್ದು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಮಾಡಿಬಿಡುತ್ತಾರೆ ಎಂದು ಹೇಳಿದರು. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಯತ್ನಾಳ್ ಹೇಳಿದರು. ಹಿಂದಿ ಭಾಷೆಯಲ್ಲಿ ಬರೆದಿರುವ ಬೋರ್ಡ್ ಕಂಡರೆ ಪ್ರತಿಭಟನೆ ನಡೆಸಿ ಅದನ್ನು ತೆಗೆಸಿಬಿಡುವ ಕನ್ನಡಪರ ಹೋರಾಟಗಾರು ಕಲಬುರಗಿಯಲ್ಲಿ ಉರ್ದುನಲ್ಲಿ ಬರೆದಿರುವ ಸಾವಿರಾರು ಬೋರ್ಡ್ಗಳಿದ್ದರೂ ಯಾಕೆ ತೆಗೆಸುವುದಿಲ್ಲ ಎಂದು ಯತ್ನಾಳ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ