ಸರ್ಕಾರ ದಮಮಕಾರಿ ನೀತಿ ಅನುಸರಿಸಿದರೆ, ಬಸ್​ಗಳ ಓಡಾಟ ನಿಲ್ಲಿಸಿ ಡಿಪೋಗಳನ್ನು ಮುಚ್ಚುತ್ತೇವೆ: ಸಾರಿಗೆ ಮುಖಂಡ

Updated on: Aug 06, 2025 | 1:09 PM

ಏಳನೇ ತಾರೀಖಿನಂದು ಸಾರಿಗೆ ನೌಕರರ ಪರ ವಕೀಲರು ಕೋರ್ಟ್ ಮೆಟ್ಟಿಲು ಹತ್ತಲಿದ್ದಾರೆ, ನೌಕರರ ಎಲ್ಲ ಸಮಸ್ಯೆಗಳನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು, ಎರಡು ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ, ಅದು ಆಗದಿದ್ದರೆ ಮುಷ್ಕರ ಮಾಡ್ತೀವಿ, ಡಿಪೋಗಳನ್ನು ಬಂದ್ ಮಾಡ್ತೀವಿ, ಡಿಪೋ ಮ್ಯಾನೇಜರ್ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಹ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಜಗದೀಶ್ ಹೇಳಿದರು.

ಬೆಂಗಳೂರು, ಆಗಸ್ಟ್ 6: ಕೋರ್ಟ್ ಆದೇಶದ ಹೊರತಾಗಿಯೂ ನಿನ್ನೆ ಮುಷ್ಕರ ನಡೆಸಿದ ಸಾರಿಗೆ ನೌಕರರಿಗೆ ನೋಟೀಸ್​ಗಳನ್ನು ನೀಡಲು ಸರ್ಕಾರ ಮುಂದಾಗಿರುವುದಕ್ಕೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಸಾರಿಗೆ ಮುಖಂಡ ಜಗದೀಶ್, ನೌಕರರು ಆತಂಕಪಡುವ ಅವಶ್ಯಕತೆಯಿಲ್ಲ, ಜಂಟಿ ಕ್ರಿಯಾ ಸಮಿತಿ (Joint Action Committee) ಅವರ ಪರವಾಗಿ ಕಾನೂನು ಹೋರಾಟ ನಡೆಸುತ್ತದೆ ಎಂದು ಹೇಳಿದರು. ಸರ್ಕಾರ ಹೀಗೇ ದಮನಕಾರಿ ನೀತಿ ಅಳವಡಿಸಿದರೆ ಸರಿಯಿರಲ್ಲ, ಕೋರ್ಟ್ ಆದೇಶಕ್ಕೆ ತಲೆಬಾಗಿ ನಾವು ಮುಷ್ಕರವನ್ನು ನಿಲ್ಲಿಸಿ ಕೆಲಸಕ್ಕೆ ಹಾಜರಾಗಿದ್ದೇವೆ, ಹೆಚ್ಚು ಸಂಬಳ ಮತ್ತು ಬೇರೆ ಮೂಲಗಳಿಂದ ಆದಾಯ ಪಡೆಯುತ್ತಿರುವ ಕೆಲ ಅಧಿಕಾರಿಗಳ ಮಾತು ಕೇಳಿಕೊಂಡು ಬೆವರು ಸುರಿಸಿ ಹಗಲು ರಾತ್ರಿ ದುಡಿಯುವ ಕಾರ್ಮಿಕರನ್ನು ಸರ್ಕಾರ ಕಡೆಗಣಿಸಬಾರದು ಎಂದು ಜಗದೀಶ್ ಹೇಳಿದರು.

ಇದನ್ನೂ ಓದಿ:   Karnataka Transport Strike; ಕೋರ್ಟ್ ಆದೇಶದಂತೆ ಮುಷ್ಕರವನ್ನು ಕೇವಲ ಮುಂದೂಡಿದ್ದೇವೆ: ಅನಂತ್ ಸುಬ್ಬಾರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ